ಬೆಳ್ತಂಗಡಿ: ಬೈಕ್ ಸವಾರನನ್ನು ತಡೆದು ನಿಲ್ಲಿಸಿ ಹಲ್ಲೆ ನಡೆಸಿದ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಮೂವರು ಯುಟ್ಯೂಬರ್‌ಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಆ.6ರಂದು ಘಟನೆ ನಡೆದಿದ್ದು, ಈ ಬಗ್ಗೆ ಹರೀಶ್ ನಾಯ್ಕ ಎಂಬವರು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದಾರೆ.
ತಾನು ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಪಾಂಗಳ ಕ್ರಾಸ್ ಬಳಿ ತಡೆದು ನಿಲ್ಲಿಸಿದ ಯುಟ್ಯೂಬರ್‌ಗಳು ತಾನು ಕುಡ್ಡರಾಂಪೇಜ್‌ನವ ಎಂದು ಹೇಳಿದ್ದು, ಈ ರಸ್ತೆಯ ಪಕ್ಕದಲ್ಲಿ ಹೆಣಗಳನ್ನು ಹೂತಿರುವ ಬಗ್ಗೆ ವಿಚಾರಿಸಿ, ತಕರಾರು ತೆಗೆದು ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಿದ್ದು, ಅದರಂತೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.