Site icon Suddi Belthangady

ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಾಟರ್ ಬೆಡ್ ವಿತರಣೆ

ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ
ಜನ ಮಂಗಲದಡಿಯಲ್ಲಿ ಉಜಿರೆ ವಲಯದ ನೀರ ಚಿಲುಮೆ ಒಕ್ಕೂಟದ ಸಂಗಮ C ತಂಡದ ಸದಸ್ಯ ರೋಶಿನಿ ಅವರ ತಂದೆಗೆ ರಕ್ತದೋತ್ತಡ ಜಾಸ್ತಿ ಆಗಿ ದೇಹದ ಎಡ ಭಾಗ ಬಲಹೀನವಾಗಿದ್ದು ಮಂಗಳೂರು ಎನಾಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಈಗ ಡಿಸ್ಚಾರ್ಜ್ ಆಗಿ ಮನೆಯಲ್ಲೇ ಮಲಗಿದಲ್ಲೇ ಇದ್ದುದರಿಂದ ಅವರಿಗೆ ವಾಟರ್ ಬೆಡ್ ನ್ನು ಹೆಗ್ಗಡೆ ಅವರು ಮಂಜೂರಾತಿ ಮಾಡಿದ್ದೂ ವಲಯದ ಮೇಲ್ವಿಚಾರಕಿ ಪೂರ್ಣಿಮಾ ಅವರು ವಿತರಣೆ ಮಾಡಿದರು.

ನೀರಚಿಲುಮೆ ಒಕ್ಕೂಟದ ಕಾರ್ಯದರ್ಶಿ ಜಯಲಕ್ಷ್ಮಿ, ನೀರಚಿಲುಮೆ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಪ್ರಮೀಳಾ, ಉಜಿರೆ A ಕಾರ್ಯಕ್ಷೇತ್ರದ ಪ್ರೇಮಲತಾ ಅವರು ಉಪಸ್ಥಿತರಿದ್ದರು.

Exit mobile version