Site icon Suddi Belthangady

ಧರ್ಮಸ್ಥಳ: ಯೂಟ್ಯೂಬರ್ಸ್ ಮೇಲೆ ಹಲ್ಲೆ ನಡೆಸಿ ಗುಂಪು ಸೇರಿದ ಪ್ರಕರಣ: 6 ಜನರ ಬಂಧನ, ಜಾಮೀನು ಮಂಜೂರು

ಧರ್ಮಸ್ಥಳ: ಗ್ರಾಮದ ಪಾಂಗಳ ಕ್ರಾಸ್ ಬಳಿ ಕ್ಷೇತ್ರದ ಬಗ್ಗೆ ಸುಳ್ಳು ಸುದ್ದಿ ಹಾಗೂ ರಿಕ್ಷಾ ಚಾಲಕರ ವಿರುದ್ಧ ಅವಹೇಳನಕ್ಕೆ ಸಂಬಂಧಿಸಿದಂತೆ 3 ಜನ ಯೂಟ್ಯೂಬ‌ರ್ ಮೇಲೆ ಹಲ್ಲೆ ಮಾಡಿದ ಪ್ರಕರಣದ ಬಳಿಕ 7:15ರ ಸುಮಾರಿಗೆ ಉಜಿರೆ ಮಹೇಶ್ ಶೆಟ್ಟಿ ತಿಮರೋಡಿ ಬಳಗ ಮತ್ತು ಧರ್ಮಸ್ಥಳ ಕ್ಷೇತ್ರದ ಭಕ್ತರ ಗುಂಪಿನ ನಡುವೆ ಅಕ್ರಮ ಕೂಟ ಸೇರಿ ಗಲಾಟೆ ಹಲ್ಲೆ ಮಾಡಿದ ಪ್ರಕರಣ ಸಂಬಂಧ ಸ್ಥಳದಲ್ಲಿ ಲಘು ಲಾಟಿ ಪ್ರಹಾರ ನಡೆದಿತ್ತು, ಧರ್ಮಸ್ಥಳ ಸಬ್ ಇನ್ಸೆಕ್ಟರ್ ಸಮರ್ಥ ಆರ್ ಗಾಣಿಗೇರ ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಸುಮೊಟೋ(BNS), 2023 (U/s-189(2),191(2),132,324(6),190) ಅಡಿಯಲ್ಲಿ 27 ಮಂದಿ ಸೇರಿದಂತೆ ಇತರರ ಮೇಲೆ ಪ್ರಕರಣ ದಾಖಲಾಗಿತ್ತು.

ಪ್ರಕರಣ ಸಂಬಂಧ ಧರ್ಮಸ್ಥಳ ಪೊಲೀಸರು ಆ.9ರಂದು ಪದ್ಮಪ್ರಸಾದ್, ಸುಹಾಸ್, ಗುರುಪ್ರಸಾದ್, ಶಶಿಕುಮಾರ್, ಕಲಂದರ್, ಚೇತನ್ 6 ಜನರನ್ನು ಧರ್ಮಸ್ಥಳ ಪೋಲಿಸರು ಬಂಧಿಸಿ ಸಂಜೆ ಬೆಳ್ತಂಗಡಿ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದ್ದು. 6 ಮಂದಿಗೂ ಜಾಮೀನು ಮಂಜೂರು ಮಾಡಿದ್ದಾರೆ.

Exit mobile version