Site icon Suddi Belthangady

ಗಂಡಿಬಾಗಿಲು: ಸಿಯೋನ್ ಆಶ್ರಮ ಟ್ರಸ್ಟ್ ನಲ್ಲಿ “ಆಟಿಡೊಂಜಿ ದಿನ” ಸ್ನೇಹಭೋಜನ ಕೂಟ

ಗಂಡಿಬಾಗಿಲು: ಸಿಯೋನ್ ಆಶ್ರಮ ಟ್ರಸ್ಟ್ ವತಿಯಿಂದ ಆ.5ರಂದು ಆಟಿಡೊಂಜಿ ದಿನ ಸ್ನೇಹಭೋಜನ ಕೂಟವನ್ನು ಸಂಭ್ರಮದಿಂದ ಆಚರಿಸಲಾಯಿತು.

ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಡಾ. ಯು.ಸಿ ಪೌಲೋಸ್ ಮತ್ತು ಟ್ರಸ್ಟಿ ಸದಸ್ಯರಾದ ಮೇರಿ ಯು.ಪಿ. ನೇತೃತ್ವದಲ್ಲಿ ಆಶ್ರಮ ನಿವಾಸಿಗಳಿಗಾಗಿ ಆಟಿ ತಿಂಗಳಿನಲ್ಲಿ ಸೇವಿಸುವ ವಿವಿಧ ಆಹಾರ ಪದಾರ್ಥಗಳನ್ನು ತಯಾರಿಸಲಾಯಿತು.

ಸ್ನೇಹಭೋಜನ ಕೂಟವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಸಂಸ್ಥೆಯ ವೈದ್ಯಾಧಿಕಾರಿ ಡಾ. ಶಿವಾನಂದ ಸ್ವಾಮಿ ಆಟಿ ತಿಂಗಳ ಆಚರಣೆ ಮತ್ತು ಆಟಿ ತಿಂಗಳಿನಲ್ಲಿ ಸೇವಿಸುವ ಆಹಾರ ಪದಾರ್ಥಗಳ ಔಷಧೀಯ ಗುಣಗಳು ಮತ್ತು ತುಳು ನಾಡಿನ ಸಂಸ್ಕೃತಿಯ ವೈಶಿಷ್ಟ್ಯತೆಗಳ ಕುರಿತು ಸಂಕ್ಷಿಪ್ತವಾಗಿ ಹಾಗೂ ಅರ್ಥಪೂರ್ಣವಾಗಿ ವಿವರಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಆಶ್ರಮ ನಿವಾಸಿಗಳಿಗೆ ತಯಾರಿಸಲಾದ ವಿವಿಧ ಆಹಾರ ಪದಾರ್ಥಗಳನ್ನು ವಿತರಿಸಲಾಯಿತು. ಸಂಸ್ಥೆಯ ಆಡಳಿತ ಮಂಡಳಿಯವರು, ಟ್ರಸ್ಟಿ ಸದಸ್ಯರು, ಸಿಬ್ಬಂದಿವರ್ಗದವರು ಮತ್ತು ಆಶ್ರಮ ನಿವಾಸಿಗಳು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದರು.

Exit mobile version