ಅಂಡಿಂಜೆ: ಆ. 8ರಂದು ಚತುರ್ಥ ವರ್ಷದ ವರಮಹಾಲಕ್ಷ್ಮಿ ಪೂಜೆಯನ್ನು ಶ್ರೀ ವಿನಾಯಕ ಶ್ರೀ ರಾಮ ಭಜನಾ ಮಂದಿರದಲ್ಲಿ ನಡೆಸಲಾಯಿತು. ಬೆಳಿಗ್ಗೆ ವರ ಮಹಾಲಕ್ಷ್ಮಿ ಕಲಶ ಪ್ರತಿಷ್ಠೆ ಮಾಡಿ, ವರ ಮಹಾಲಕ್ಷ್ಮಿ ಪೂಜೆಯನ್ನು ನಡೆಸಲಾಯಿತು.
ವರಮಹಾಲಕ್ಷ್ಮಿ ವ್ರತ ಪೂಜಾ ಸಮಿತಿಯ ಅಧ್ಯಕ್ಷತೆಯನ್ನು ಸುಜಾತ ಅಮಣೆ ಅವರು ವಹಿಸಿದ್ದರು. ವರಮಹಾಲಕ್ಷ್ಮಿ ಪೂಜೆ ನಡೆಸುವುದರಿಂದ ನಮ್ಮಲ್ಲಿ ಒಗ್ಗಟ್ಟಿನ ಭಾವನೆ ಬರುತ್ತದೆ ಮನಸ್ಸಿಗೆ ಶಾಂತಿ ನೆಮ್ಮದಿ ಆರೋಗ್ಯ ಹೆಚ್ಚಾಗುವುದು. ಪೂಜಾ ಕಾರ್ಯಕ್ರಮದ ಜೊತೆಗೆ ಧಾರ್ಮಿಕ ಪ್ರವಚನವನ್ನು ನೀಡಲು ಬಡಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಸ್ವಾಮ್ಯ ಬಿ., ಮಹಾಬಲ ಪೂಜಾರಿ ನೆಲ್ಲಿಂಗೇರಿ ವರಮಹಾಲಕ್ಷ್ಮಿ ಪೂಜಾ ಮಹತ್ವದ ಬಗ್ಗೆ, ಮಕ್ಕಳನ್ನು ನಾವು ಬೆಳೆಸುವ ರೀತಿ ಸಮಯ, ಪರಿಪಾಲನೆ, ಕೆಲಸ ಕಾರ್ಯದ ಬಗ್ಗೆ ಮಹಿಳೆಯರಿಗೆ ಮಾಹಿತಿಯನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ಭಜನಾ ಮಂಡಳಿಯ ಮತ್ತು ಯುವಕ ಮಂಡಲದ ಸರ್ವ ಸದಸ್ಯರು ಸಹಕರಿಸಿದರು. ಮುಂದಿನ ವರ್ಷದ ಪದಾಧಿಕಾರಿಗಳ ರಚನೆಯನ್ನು ಮಾಡಲಾಯಿತು. ಮಲ್ಲಿಕಾ ಸ್ವಾಗತಿಸಿದರು. ಕಾರ್ಯಕ್ರಮವನ್ನು ಸೌಮ್ಯ ಪ್ರಶಾಂತ್ ನಿರೂಪಣಿ ಮಾಡಿದರು. ಸುಹಾಸಿನಿ ಧನ್ಯವಾದ ಸಮರ್ಪಿಸಿದರು.