Site icon Suddi Belthangady

ಸಾಮೂಹಿಕ ವರ ಮಹಾಲಕ್ಷ್ಮೀ ಪೂಜೆ: ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ- ದಂಪತಿಯಿಂದ 1,300 ಸೀರೆ ವಿತರಣೆ

ಬೆಳ್ತಂಗಡಿ: ಶ್ರೀರಾಮ ವಿದ್ಯಾಲಯ, ಶ್ರೀರಾಮ ಶಿಶು ಮಂದಿರ ನೆಲ್ಯಾಡಿ, ಚಾಮುಂಡೇಶ್ವರಿ ಭಜನಾ ಮಂಡಳಿ, ದೋಂತಿಲ ಮತ್ತು ಮಾತೃಮಂಡಳಿ ನೆಲ್ಯಾಡಿ ಆಶ್ರಯದಲ್ಲಿ ನೆಲ್ಯಾಡಿಯ ಸೂರ್ಯನಗರದ ಶ್ರೀರಾಮ ವಿದ್ಯಾಲಯದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವೃತ ಕಾರ್ಯಕ್ರಮ ಆ.8ರಂದು ನಡೆಯಿತು.

ಬೆಳ್ತಂಗಡಿಯ ಧಾರ್ಮಿಕ ಮುಖಂಡ, ಬೆಂಗಳೂರು ಉದ್ಯಮಿ, ದಾನಿ ಕಿರಣ್ ಚಂದ್ರ ಡಿ. ಪುಷ್ಪಗಿರಿ ಹಾಗೂ ಅವರ ಪತ್ನಿ ತಾರಾ ಕಿರಣ್ ಚಂದ್ರ ಡಿ. ಪುಷ್ಪಗಿರಿ ಉರುವಾಲು ಅವರು ಪ್ರಸಾದ ರೂಪದಲ್ಲಿ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಮಹಿಳೆಯರಿಗೆ ಸೀರೆ ದಾನ ಮಾಡಿ ಶುಭಕೋರಿದರು.

ವರಮಹಾಲಕ್ಷ್ಮೀ ವೃತ ಪೂಜಾ ಸಮಿತಿ ಅಧ್ಯಕ್ಷೆ ಸುಪ್ರಿತಾ ರವಿಚಂದ್ರ ಹೊಸವತ್ತು ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರಿನ ವಿವೇಕಾನಂದ ಕಾಲೇಜಿನ ಪ್ರಾಧ್ಯಾಪಕಿ ಡಾ | ಗೀತಾ ಕುಮಾರಿ ಟಿ. ಧಾರ್ಮಿಕ ಉಪನ್ಯಾಸ ನೀಡಿದರು. ನೆಲ್ಯಾಡಿ ಅಶ್ವಿನಿ ಆಸ್ಪತ್ರೆ ವೈದ್ಯ ಡಾ | ಶಮಂತ್ ವೈ.ಕೆ, ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯ ಸ್ಕೂಲ್ ಕೌನ್ಸಿಲ‌ರ್ ನಿವೇದಿತಾ ಪ್ರಸನ್ನ ಹಾಜರಿದ್ದರು.

Exit mobile version