ಧರ್ಮಸ್ಥಳ: ಬೋಳಿಯರ್ ನಲ್ಲಿ ಕಾಡಾನೆಯು ಆ.9ರಂದು ಬೆಳಿಗ್ಗೆ ಮತ್ತೆ ರಸ್ತೆಯ ಬದಿ ಪ್ರತ್ಯಕ್ಷವಾಗಿದೆ. ಶಾಲಾ ಮಕ್ಕಳು ಬಸ್ ಗೆ ಕಾಯುತ್ತಿರುವ ವೇಳೆ ಕಾಡಾನೆಯು ಪ್ರತ್ಯಕ್ಷವಾಗಿದ್ದು ಯಾವುದೇ ತೊಂದರೆ ಮಾಡದೆ ಬೋಳಿಯಾರ್ ನಿಂದ ಮುಳಿಕ್ಕರ್ ಆಗಿ ಪುದುವೆಟ್ಟು ಕಡೆ ತೆರಳಿದೆ ಎನ್ನಲಾಗಿದೆ.
ಹಗಲು ಹೊತ್ತು ಕಾಣಿಸುತ್ತಿರುವುದರಿಂದ ಜನರಿಗೆ ಓಡಾಡಲು ಭಯಪಡುವಂತ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಅರಣ್ಯ ಇಲಾಖೆಯವರು ಕ್ರಮ ಕೈಗೊಳ್ಳಬೇಕಾಗಿ ಸ್ಥಳೀಯರು ಆಗ್ರಹಿಸಿದ್ದಾರೆ.