ಬೆಳ್ತಂಗಡಿ: ಆಚಾರ ವಿಚಾರ ಸಂಪ್ರದಾಯ ಸಂಸ್ಕೃತಿಯಲ್ಲಿ ಬಂಟ ಸಮುದಾಯ ಯಾವಾಗಲೂ ವಿಶೇಷವಾಗಿ ಕಂಡು ಬರುತ್ತದೆ ಎಂದು ಬೆಳ್ತಂಗಡಿ ಬಂಟರ ಸಂಘದ ಅಧ್ಯಕ್ಷ ಜಯಂತ್ ಶೆಟ್ಟಿ ಭಂಡಾರಿಗುಡ್ಡೆ ಹೇಳಿದರು.
ಬೆಳ್ತಂಗಡಿ ಬಂಟರ ಮಹಿಳಾ ವಿಭಾಗ ಬಂಟರ ಸಂಘದಲ್ಲಿ ಅ. 8 ರಂದು ಆಯೋಜಿಸಿದ ವರಮಹಾಲಕ್ಷ್ಮಿ ವ್ರತಾಚರಣೆಯನ್ನುದ್ದೇಶಿಸಿ ಮಾತನಾಡಿದರು.
ಇದೇ ವೇಳೆ ಉಪಸ್ಥಿತರಿದ್ದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರಂಗ ನಟಿ ಸುಜಾತ ಶೆಟ್ಟಿ ಪೆರಿಂಜೆ ಮಾತನಾಡಿ, ಇವತ್ತು ಬೆಳ್ತಂಗಡಿಯ ಬಂಟ ಸಮುದಾಯ ಒಂದಾಗಲು ಕಾರಣ ಸಂಘಟನೆ, ಅದೇ ರೀತಿ ಬಂಟರು ಸದಾ ತಮ್ಮತನವನ್ನು ಕಾಯಬೇಕು ಎಂದರು.
ಬಂಟರ ಮಹಿಳಾ ವಿಭಾಗ ಆಯೋಜಿಸಿದ್ದ ವರಮಹಾಲಕ್ಷ್ಮಿ ವ್ರತಾಚರಣೆಯಲ್ಲಿ 350ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಬೆಳ್ತಂಗಡಿಯ ಬಂಟ ಸಮುದಾಯದವರು ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾದರು.
ಬಂಟರ ಯಾನೆ ನಾಡವರ ಸಂಘದ, ಗುರುವಾಯನಕೆರೆಯ ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ, ಬಂಟ ಮಹಿಳಾ ವಿಭಾಗದ, ಯುವ ವಿಭಾಗದ ಪದಾಧಿಕಾರಿಗಳು ನಿರ್ದೇಶಕರು ಸೇರಿದಂತೆ ಬೆಳ್ತಂಗಡಿಯ ಬಂಟ ಸಮಾಜದವರು ಭಾಗವಹಿಸಿದ್ದರು.
ಬಂಟರ ಮಹಿಳಾ ವಿಭಾಗದ ಅಧ್ಯಕ್ಷೆ ಜಯಲಕ್ಷ್ಮಿ ಸಾಮಾನಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತ ಕೋರಿದರು.