ಬೆಳ್ತಂಗಡಿ: ತಾಲೂಕು ಒಕ್ಕಲಿಗ ಗೌಡರ ಮಹಿಳಾ ವೇದಿಕೆಯ ನೇತೃತ್ವದಲ್ಲಿ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ, ಉಜಿರೆ ಹಾಗೂ ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘ ಉಜಿರೆ ಇವರ ಸಹಯೋಗದೊಂದಿಗೆ 4ನೇ ವರ್ಷದ ವರಮಹಾಲಕ್ಷ್ಮೀ ವ್ರತ ಪೂಜೆಯು ಎಸ್.ಪಿ. ಆಯಿಲ್ ಮಿಲ್ ವಠಾರದಲ್ಲಿ ಆ.8ರಂದು ಜರಗಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಚಾರ್ಮಾಡಿ ಸರಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಸೀತಮ್ಮ ದೇವಿದಾಸ್ ಗೌಡ ಮಾಲ್ದಡ್ಕ ಆಗಮಿಸಿ ವರಮಹಾಲಕ್ಷ್ಮಿ ವ್ರತದ ಮಹತ್ವವನ್ನು ಸಾರಿದರು.
ವೇದಿಕೆಯಲ್ಲಿ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಉಜಿರೆ ಇದರ ಅಧ್ಯಕ್ಷ ರಂಜನ್ ಜಿ. ಗೌಡ ಮಾತನಾಡಿ ಇನ್ನು ಹೆಚ್ಚು ಕಾರ್ಯಕ್ರಮ ಮಾಡುವ ಶಕ್ತಿ ನೀಡಲಿ ಎಂದು ಹಾರೈಸಿದರು. ವಿಜಯ ಗೌಡ ವೇಣೂರು ಮಾತನಾಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ದಾಮೋದರ ಗೌಡ ಸುರುಳಿ, ಸೌಮ್ಯಲತ ಜಯಂತ ಗೌಡ ಗುರಿಪಳ್ಳ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಗೀತಾ ಚಿದಾನಂದ ಗೌಡ ಬಡೆಕೊಟ್ಟು ಸ್ವಾಗತಿಸಿ, ಅನುಪಮಾ ಸತೀಶ್ ಗೌಡ ಮಾಳಿಗೆಮನೆ ಕಾರ್ಯಕ್ರಮ ನಿರೂಪಿಸಿದರು. ಬೆಳ್ತಂಗಡಿ ತಾಲೂಕು ಮಹಿಳಾ ವೇದಿಕೆಯ ಅಧ್ಯಕ್ಷೆ ಅಪರ್ಣ ಶಿವಕಾಂತ ಗೌಡ ಅಧ್ಯಕ್ಷತೆ ವಹಿಸಿ ಧನ್ಯವಾದವಿತ್ತರು.