Site icon Suddi Belthangady

ಸೇವಾಭಾರತಿ ನೂತನ ಕಟ್ಟಡ ನಿರ್ಮಾಣಕ್ಕೆ ಕನ್ಯಾಡಿ ಹಿಂದೂ ಧಾರ್ಮಿಕ ಸೇವಾ ಸಮಿತಿಯಿಂದ ರೂ. 25,000 ದೇಣಿಗೆ

ಕನ್ಯಾಡಿ: ಕನ್ಯಾಡಿಯ ಹಿಂದೂ ಧಾರ್ಮಿಕ ಸೇವಾ ಸಮಿತಿಯ ಸದಸ್ಯರು ಕನ್ಯಾಡಿ ಸೇವಾನಿಕೇತನಕ್ಕೆ ಆ. 8ರಂದು ಭೇಟಿ ನೀಡಿದರು. ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಕನ್ಯಾಡಿಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಪುನಶ್ಚೇತನ ಕೇಂದ್ರದ ಕಟ್ಟಡಕ್ಕೆ ರೂ. 25,000 ಚೆಕ್ ನೀಡಿ ಕಟ್ಟಡದ ನಿರ್ಮಾಣ ಶೀಘ್ರವಾಗಿ ನೆರವೇರುವಂತೆ ಶುಭಹಾರೈಸಿದರು. ಸಂಸ್ಥೆಯ ಸಂಸ್ಥಾಪಕ ಕೆ.ವಿನಾಯಕರಾವ್ ಅವರು ಸಂಸ್ಥೆಯ ಪರವಾಗಿ ದೇಣಿಗೆಯನ್ನು ಸ್ವೀಕರಿಸಿ ಧನ್ಯವಾದವಿತ್ತರು.

ಕನ್ಯಾಡಿ ಹಿಂದೂ ಧಾರ್ಮಿಕ ಸೇವಾ ಸಮಿತಿಯ ಅಧ್ಯಕ್ಷ ರಾಜೇಶ್.ಪಿ, ಕಾರ್ಯದರ್ಶಿ ಗಣೇಶ್ ಬಜಿಲ, ಉಪಾಧ್ಯಕ್ಷ ಅರುಣ್ ನಾಯ್ಕ್, ಸಂಯೋಜಕ ರಾಘವ ಕುರ್ಮಾಣಿ, ಸಹ ಕಾರ್ಯದರ್ಶಿ ವಿದ್ಯಾಧರ್ ರೈ, ಗಣೇಶೋತ್ಸವ ಸಮಿತಿ ಅಧ್ಯಕ್ಷ ಚೇತನ್ ಗುಡಿಗಾರ್, ಉಪಾಧ್ಯಕ್ಷ ಗೋವಿಂದ ಸುವರ್ಣ ಪೊಂಗರು, ಸದಸ್ಯರಾದ ಮಹಾಬಲ ನಾಯ್ಕ ಮತ್ತು ಉಮೇಶ ಆಚಾರ್ಯ ಉಪಸ್ಥಿತರಿದ್ದರು.

Exit mobile version