ವೇಣೂರು: ಫಲ್ಗುಣಿ ಸೇವಾ ಸಂಘದ ಸಹಯೋಗದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವೇಣೂರು ಇದರ ಬೆಳ್ಳಿಹಬ್ಬ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ಶ್ರೀ ಕ್ಷೇತ್ರ ಪಡ್ಯಾರಬೆಟ್ಟ ಅನುವಂಶೀಯ ಆಡಳಿತ ಮೊಕ್ತೇಸರ ಎ. ಜೀವಂಧರ ಕುಮಾರ್ ಶ್ರೀ ಕ್ಷೇತ್ರ ಪಡ್ಯಾರಬೆಟ್ಟದಲ್ಲಿ ಬಿಡುಗಡೆಗೊಳಿಸಿ ಶುಭಹಾರೈಸಿದರು.
ಫಲ್ಗುಣಿ ಸೇವಾ ಸಂಘದ ಅಧ್ಯಕ್ಷ ಜಯರಾಜ್ ವಿ.ಎಸ್., ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಗೌರವ ಅಧ್ಯಕ್ಷ ಡಾ.ಶಾಂತಿ ಪ್ರಸಾದ್, ಅಧ್ಯಕ್ಷ ಜಗದೀಶ್ಚಂದ್ರ ಡಿ.ಕೆ., ಉಪಾಧ್ಯಕ್ಷರುಗಳಾದ ಪ್ರಶಾಂತ್ ಹೆಬ್ಬಾರ್, ಸುದತ್ ಜೈನ್, ಕಾರ್ಯದರ್ಶಿ ಪ್ರಶಾಂತ್ ಹೆಗ್ಡೆ, ಕೋಶಾಧಿಕಾರಿ ಶ್ರೀಕಾಂತ ಉಡುಪ, ಜೊತೆ ಕಾರ್ಯದರ್ಶಿಗಳಾದ ಅರುಣ್ ಐಂದಲ್ಕೆ , ಪ್ರಸಾದ್ ಜೈನ್, ಸ್ವಾಗತ ಸಮಿತಿ ಸದಸ್ಯರಾದ ಸುಂದರ ಹೆಗ್ಡೆ, ಉಮೇಶ್ ನಡ್ತಿಕಲ್, ಶ್ರೀಪತಿ ಉಪಾಧ್ಯಾಯ, ಸಮಿತಿ ಸದಸ್ಯರಾದ ಪ್ರಸನ್ನ ಹೆಬ್ಬಾರ್, ಧನಂಜಯ ಜೈನ್ ಮೂಡುಕೋಡಿ, ಪ್ರಮೋದ್ ಕುಮಾರ್, ಗಂಗಾಧರ ಆಚಾರ್ಯ, ಹೇಮಂತ ಭಟ್, ಸುಧೀರ್ ಬಜಿರೆ, ಸಜೇಶ್ ಪೆರ್ಮಾಣು, ಪ್ರವೀಣ್ ಭಂಡಾರಿ ಶ್ರೀ ಕ್ಷೇತ್ರ ಪಡ್ಯಾರಬೆಟ್ಟಿನ ವಿಶ್ವಾಸ್ ಜೈನ್ ಉಪಸ್ಥಿತರಿದ್ದರು.