ಉಜಿರೆ: ಸೋಲು ಗೆಲುವಿಗೆ ನಿರಾಳವಾಗಿರಿ, ಸಾಧನೆ ಕಡೆಗೆ ಚಿತ್ತವಿರಲಿ ಎಂದು ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ವಾಲಿಬಾಲ್ ಟೂರ್ನಮೆಂಟ್ ಅನ್ನು ಉದ್ಘಾಟನೆ ಮಾಡಿದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಮಾತನಾಡಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಉತ್ತಮ ಆಹಾರ, ನಿತ್ಯ ವ್ಯಾಯಾಮದ ಮೂಲಕ ಕ್ರೀಡೆಯಲ್ಲಿ ಉತ್ತಮಿಕೆ ಸಾಧಿಸಲು ಸಾಧ್ಯ. ಜೀವನದಲ್ಲಿ ಶ್ರದ್ದೆಯಿಂದ ಸಾಧನೆ ಸಾಧ್ಯವೆಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಚಾರಿ ಪೊಲೀಸ್ ಉಪ ನಿರೀಕ್ಷಣಾಧಿಕಾರಿಯಾಗಿರುವ ಶ್ರೀಯುತ ಏನ್. ಡಿ. ಜಕ್ಕಣ್ಣವರ್ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಸುನಿಲ್ ಪಂಡಿತ್ ಸ್ವಾಗತಿಸಿದರು.
ಕಾಲೇಜಿನ ಉಪ ಪ್ರಾಂಶುಪಾಲ ಮನೀಶ್ ಕುಮಾರ್, ದೈಹಿಕ ಶಿಕ್ಷಕರಾಗಿರುವ ಲಕ್ಷ್ಮಣ್ ಜಿ.ಡಿ., ಎಸ್.ಡಿ.ಎಂ. ಕ್ರೀಡಾ ಕ್ಲಬ್ ನ ದೈಹಿಕ ನಿರ್ದೇಶಕ ರಮೇಶ್ ಹೆಚ್., ಬೆಳ್ತಂಗಡಿ ತಾಲೂಕಿನ ಕ್ರೀಡಾ ಸಂಯೋಜಕ ಸಂದೀಪ್ ಐ., ವೇದಿಕೆಯಲ್ಲಿ ಉಪಸ್ಥಿತರಿದ್ದರು.