ಮೂಡುಬಿದಿರೆ: ಆಳ್ವಾಸ್ ಪದವಿ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಹಾಗೂ ಕಾಲೇಜಿನ ವಿಕಿಪೀಡಿಯಾ ಕ್ಲಬ್‌ನ ಕ್ರಿಯಾಶೀಲ ಸದಸ್ಯೆಯಾಗಿದ್ದ ಯಕ್ಷಿತಾ ಕೀನ್ಯಾದ ನೈರೋಬಿಯಲ್ಲಿ ಆಗಸ್ಟ್ 6ರಿಂದ 9ರವರೆಗೆ 2025″ ಅಂತಾರಾಷ್ಟ್ರೀಯ ನಡೆಯಲಿರುವ ಸಮ್ಮೇಳನದಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದಾರೆ.
ವಿಕಿಮೇಡಿಯಾ ಫೌಂಡೇಶನ್‌ನ ಆಹ್ವಾನಿತರಿಂದ ಯಕ್ಷಿತಾ ಭಾರತ ದೇಶದ ಪ್ರತಿನಿಧಿಯಾಗಿ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ವಿಕಿಪೀಡಿಯಾದ ಮೂಲಕ ಮುಕ್ತ ಜ್ಞಾನ ವಿಸ್ತರಣೆಗೆ ಮಹತ್ತರವಾದ ಕೊಡುಗೆ ನೀಡುತ್ತಿದ್ದು, ಈ ಆಮಂತ್ರಣವು ಅವರ ಸೇವೆಯ ಪ್ರಾಮುಖ್ಯತೆಯನ್ನು ಪ್ರತಿಬಿಂಬಿಸುತ್ತದೆ.
ಆ. 6ರಿಂದ 9ರವರೆಗೆ ನಡೆಯುವ ಈ ಚರ್ಚಾ ವೇದಿಕೆಯಲ್ಲಿ ಯಕ್ಷಿತಾ ವಿವಿಧ ದೇಶಗಳ ವಿಕಿಪೀಡಿಯನ್‌ಗಳೊಂದಿಗೆ ಜ್ಞಾನ ವಿನಿಮಯದಲ್ಲಿ ತೊಡಗಿಕೊಂಡು ತಮ್ಮ ಅನುಭವ ಹಾಗೂ ಕಲಿಕೆಯನ್ನು ಭಾರತೀಯ ವಿಕಿಪೀಡಿಯಾ ಸಮುದಾಯದ ಪೈಕಿ ಹಂಚಿಕೊಳ್ಳುವ ಉದ್ದೇಶವನ್ನು ಅವರು ಹೊಂದಿದ್ದಾರೆ.
ಯಕ್ಷಿತಾ ವಿಕಿಪೀಡಿಯಾ ಹಾಗೂ ವಿಕಿಮೀಡಿಯಾ ಪ್ರಾಜೆಕ್ಟ್‌ಗಳಲ್ಲಿ ಹಲವಾರು ತರಬೇತಿ ಮತ್ತು ಸಮ್ಮೇಳನಗಳಲ್ಲಿ ಭಾಗವಹಿಸಿದ್ದು, ಅವರ ಸಕ್ರಿಯ ಪಾಲ್ಗೊಳ್ಳುವಿಕೆಯ ಸಲುವಾಗಿ 2020ರಲ್ಲಿ ಪ್ರಾಜೆಕ್ಟ್ ಟೈಗರ್ 2.0 ಯೋಜನೆಯಡಿಯಲ್ಲಿ ಎಸರ್ ಲ್ಯಾಪ್ಟಾಪ್ ಹಾಗೂ 2024ರಲ್ಲಿ ಮ್ಯಾಕ್‌ಬುಕ್ ಪಡೆದುಕೊಂಡಿದ್ದರು. ಪ್ರಸ್ತುತ ಅವರು ಪುಣೆಯ ಎಕ್ಸಂಜೆರ್ ಸಂಸ್ಥೆಯಲ್ಲಿ ಕೊಡ್ ಡೆವಲಪರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.