Site icon Suddi Belthangady

ರಾಜೀವ್ ಬಿ.ಹೆಚ್. ನಿರ್ದೇಶನದ “ತಾಕತ್” ಕಿರುಚಿತ್ರ ಬಿಡುಗಡೆ

ಬೆಳ್ತಂಗಡಿ: ರಾಜೀವ್ ಬಿ. ಹೆಚ್. ನಿರ್ದೇಶನದ “ತಾಕತ್” ಟೆಲಿ ಚಿತ್ರವನ್ನು ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕ ಸುಮಂತ್ ಕುಮಾರ್ ಜೈನ್ ಆ. 7ರಂದು ಬಿಡುಗಡೆ ಮಾಡಿದರು.

ಇಂದಿನ ಯುವ ಜನತೆ ಮಾದಕ ವ್ಯಸನಕ್ಕೆ ತುತ್ತಾಗುತ್ತಿರುವುದು ನಿಜಕ್ಕೂ ಆಘಾತಕಾರಿ ವಿಚಾರ, ಈ ಹಿನ್ನಲೆಯಲ್ಲಿ ಇಂತಹ ಜಾಗೃತಿ ಮೂಡುವ ಚಿತ್ರಗಳು ಯುವ ಸಮೂಹವನ್ನು ಎಚ್ಚರಿಸುವಲ್ಲಿ ಸಹಕಾರಿ, ಎಲ್ಲರೂ ಇಂತಹ ಪ್ರಯತ್ನವನ್ನು ಬೆಂಬಲಿಸಬೇಕು” ಎಂದು ಹೇಳಿದ ಸುಮಂತ್ ಅವರು, ತಾಕತ್ ಚಿತ್ರವು ಯಶಸ್ವಿಯಾಗಲಿ ಎಂದು ಹಾರೈಸಿದರು.

ತಾಕತ್ ಚಿತ್ರದ ಛಾಯಾಗ್ರಾಹಕ ಪ್ರಣಿತ್ ರಾಜ್, ಸಹ ಛಾಯಾಗ್ರಾಹಕ ಮನೋಜ್, ಉದ್ಯಮಿ ಧರ್ಮಸ್ಥಳದ ಚಂದನ್ ಕಾಮತ್, ನಟ ಉಮೇಶ್ ಪ್ರಭು, ದೇವಾನಂದ್, ಚಲನಚಿತ್ರ ನಿರ್ದೇಶಕ ಕೃಷ್ಣ ಬೆಳ್ತಂಗಡಿ ಮುಂತಾದವರು ಉಪಸ್ಥಿತರಿದ್ದರು.
ನಿರ್ದೇಶಕ ರಾಜೀವ್ ಬಿ. ಎಚ್. ಸ್ವಾಗತಿಸಿ, ವಂದಿಸಿದರು.

Exit mobile version