Site icon Suddi Belthangady

ಎಸ್.ಐ.ಟಿಯಿಂದ ಇಂದು ಉತ್ಖನನ ಇಲ್ಲ-ಎಸ್.ಐ.ಟಿ ಕಚೇರಿಗೆ ಬಂದಿದ್ದ ಹಲವರು ಅಧಿಕಾರಿಗಳು, ಮುಸುಕುಧಾರಿ ವಾಪಸ್

ಬೆಳ್ತಂಗಡಿ: ಪಾಯಿಂಟ್ ನಂಬರ್ 13ರ ಉತ್ಖನನ ಕಾರ್ಯ ಇಂದು ನಡೆಯುವುದಿಲ್ಲ. ಈಗಾಗಲೇ ಬೆಳಗ್ಗಿನಿಂದ ಕಾಯುತ್ತಿದ್ದ ಅಧಿಕಾರಿಗಳಲ್ಲಿ ಕಂದಾಯ,ಅರಣ್ಯ,ಸೋಕೋ ಅಧಿಕಾರಿಗಳು ವಾಪಾಸಾಗಿದ್ದಾರೆ. ತನ್ನ ವಕೀಲರ ಜೊತೆ ಮುಸುಕುಧಾರಿಯೂ ಕೂಡ ವಾಪಾಸಾಗಿದ್ದಾರೆ. ಬೆಳ್ತಂಗಡಿ ಎಸ್. ಐ. ಟಿ ಕಚೇರಿಯಲ್ಲಿ ಎಸ್. ಐ. ಟಿ ಮುಖ್ಯಸ್ಥ ಮಹತ್ವದ ಸಭೆ ನಡೆಸುತ್ತಿದ್ದಾರೆ. ಎ .ಸಿ ಸ್ಟೆಲ್ಲಾ ವರ್ಗೀಶ್ ಅವರು ಬೆಳ್ತಂಗಡಿ ತಾಲೂಕು ಸೌಧದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 13ನೇ ಗುರುತಿನ ಉತ್ಖನನ ಕಾರ್ಯ ನಾಳೆ ನಡೆಯುವ ಸಾಧ್ಯತೆಯಿದೆ.

Exit mobile version