Site icon Suddi Belthangady

ಪಟ್ರಮೆ: ಸೂರ್ಯತ್ತಾವು ಸ.ಕಿ.ಪ್ರಾ. ಶಾಲೆಯ ಶೌಚಾಲಯ ಕಟ್ಟಡ ಉದ್ಘಾಟನೆ:ವರ್ಗಾವಣೆಗೊಂಡ ಪಿಡಿಓ; ಅಮ್ಮಿ ಬಿ.ಪಿ. ಅವರಿಗೆ ಸನ್ಮಾನ

ಪಟ್ರಮೆ: ಸೂರ್ಯತ್ತಾವು ಸರಕಾರಿ ಕಿರಿಯ ಪ್ರಾರ್ಥಮಿಕ ಶಾಲೆಯ ಬಾಲಕ-ಬಾಲಕಿಯರಿಗೆ ಶೌಚಾಲಯ ಕಟ್ಟಡವನ್ನು ಗ್ರಾಮ ಪಂಚಾಯತ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಿರ್ಮಿಸಿದ್ದು ಇದರ ಉದ್ಘಾಟನೆಯನ್ನು ಪಂಚಾಯತ್ ಅಧ್ಯಕ್ಷ ಮನೋಜ್ ಕುಮಾರ್ ಆ. 7ರಂದು ಉದ್ಘಾಟಿಸಿದರು.

5,20,000 ವೆಚ್ಚದಲ್ಲಿ ನಿರ್ಮಾಣ ಗೊಂಡ ಈ ಕಟ್ಟಡಕ್ಕೆ ಪಂಚಾಯತ್ ಉದ್ಯೋಗ ಖಾತರಿ ಯೋಜನೆಯಡಿ. 1,91,000 ಉಳಿಕೆ 3,29,000ಮೊತ್ತವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಭರಿಸಿದೆ. ಇದೆ ಸಂಧರ್ಭದಲ್ಲಿ ಶಾಲಾ ಎಸ್. ಡಿ. ಎಂ. ಸಿ ಯಿಂದ ಪಂಚಾಯತ್ ಪಿಡಿಓ ಆಗಿ ಕಾರ್ಯನಿರ್ವಹಿಸಿ ಕಡಬ ತಾಲೂಕಿನ ಮರ್ದಳ ಕ್ಕೆ ವರ್ಗಾವಣೆ ಗೊಂಡಿರುವ ಅಮ್ಮಿ ಬಿ.ಪಿ. ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಪಂಚಾಯತ್ ಉಪಾಧ್ಯಕ್ಷೆ ಮೋಹಿನಿ,ನೂತನವಾಗಿ ಆಗಮಿಸಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಗೌಡ, ಸದಸ್ಯರಾದ ರಾಜೇಶ್ ರೈ, ಯತೀಶ್ ಕುಮಾರ್,ಮೀನಾ ಕುಮಾರಿ, ಗಿರಿಜಾ,ಶಾಲೆಯ ಮುಖ್ಯ ಗುರುಗಳಾದ ಪ್ರಸಾದ್ ಶೆಟ್ಟಿ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಚೆನ್ನಪ್ಪ ಗೌಡ ಗುತ್ತಿಗೆ ದಾರ ಉಮ್ಮರ್, ಶಾಲಾ ಎಸ್ ಡಿ ಎಂ ಸಿ ಸದಸ್ಯರು ಮಕ್ಕಳು ಉಪಸ್ಥಿತರಿದ್ದರು.

Exit mobile version