ಶಿಶಿಲ: ದೇವಾಲಯದ ಕಪಿಲಾ ನದಿಗೆ ಹಲವಾರು ವರ್ಷದ ಹಿಂದೆ ಕಿಂಡಿ ಆಣೆಕಟ್ಟು ನಿರ್ಮಿಸಲಾಗಿತ್ತು. ಅದರಿಂದ ಕೃಷಿಕರಿಗೆ ಅನುಕೂಲವೂ ಆಗುತ್ತಿದ್ದು, ಬೇಸಗೆಯಲ್ಲಿ ನೀರಿನ ಅಭಾವ ಮತ್ತ್ವಸಂಕುಲಗಳಿಗೂ ಅನುಕೂಲವಾಗಿತ್ತು. ಪ್ರವಾಸಿಗರು ನೀರು ನೋಡಿ ಖುಷಿ ಪಡುತ್ತಿದ್ದರು.
ಅವೈಜ್ಞಾನಿಕ ಕಾಮಗಾರಿ: ಆದರೆ ಇದರ ನಿರ್ಮಾಣ ತೀರಾ ಅವೈಜ್ಞಾನಿಕವಾಗಿ ನಡೆದಿದ್ದು, ಅಗಲವಾದ ಕಪಿಲಾ ನದಿಯನ್ನು ಕಿರಿದಾಗಿಸಿ ಕಟ್ಟಲಾಗಿದೆ. ಕಿಂಡಿಗಳನ್ನೂ ಹತ್ತಿರ ಹತ್ತಿರವಾಗಿ ನಿರ್ಮಿಸಲಾಗಿದ್ದು ನೀರು ಸರಾಗವಾಗಿ ಹರಿದಾಡಲೂ ಅನಾನುಕೂಲವಾಗಿದೆ. ಮಳೆಗಾಲದಲ್ಲಿ ನಿತ್ಯ ಮರಗಳು ಸಿಲುಕುವಂತಾಗುತ್ತಿದೆ. ಮಳೆಗಾಲದಲ್ಲೂ ದೇವಾಲಯಕ್ಕೆ ನೀರು ನುಗ್ಗಿ ಕೃಷಿ ಹಾನಿ, ಶಿಶಿಲ ದೇವಾಲಯಕ್ಕೂ ತುಂಬಾ ತೊಂದರೆ ಆಗಿ ಪರಿಣಮಿಸುತ್ತಿದೆ. ಈಗಾಗಲೇ ಮೂರು ಬಾರಿ ದೇವಾಲಯದ ಪ್ರಾಂಗಣಕ್ಕೆ ನೀರು ನುಗ್ಗಿ ಬಹಳ ಹಾನಿಯಾಗಿದೆ. ದೇವಾಲಯದ ನದಿ ದಂಡೆ ಒಡೆದು ಹಾನಿಯಾಗಿದೆ. ಒಳಾಂಗಣ, ಹೊರಾಂಗಣ ಪೂರ್ತಿ ಕೆಸರು ಕಸದಿಂದ ತುಂಬಿ ತೊಂದರೆಯಾಗಿದೆ. ಪ್ರತಿ ಬಾರಿ ಆಟೋ ರಿಕ್ಷಾದವರು ಊರಿನವರು ಸ್ವಚ್ಛ ಗೊಳಿಸುವ ಪರಿಸ್ಥಿತಿ ಎದುರಾಗಿದೆ.
ಮರೀಚಿಕೆಯಾದ ಸೇತುವೆ ಬೇಡಿಕೆ: ಶಿಶಿಲ ಗ್ರಾಮದ ಜನಸಂಖ್ಯೆ ಅರ್ಧ ಭಾಗ ಕಪಿಲಾ ನದಿಯ ಎಡ ಭಾಗದಲ್ಲಿದೆ. ಇದೀಗ ಆ ಭಾಗದ ಕೃಷಿಕರಿಗೆ, ಶಾಲಾ ಮಕ್ಕಳು ಮತ್ತು ಮಹಿಳೆಯರಿಗೆ ಗ್ರಾಮಸ್ಥರೆ ನಿರ್ಮಿಸಿದ ತೂಗು ಸೇತುವೆಯನ್ನು ಅವಲಂಬನೆ ಮಾಡುತ್ತಿದ್ದಾರೆ. ಅಣೆಕಟ್ಟು ಮೇಲ್ಬಾಗದಲ್ಲಿ ವಾಹನ ಓಡಾಟ ತೀರಾ ಅಪಾಯಕಾರಿಯಾಗಿರುತ್ತದೆ. ದೇವಾಲಯ ಮತ್ತು ಗ್ರಾಮಸ್ಥರಿಗಾಗಿ ಸೇತುವೆ ನಿರ್ಮಾಣ ಕಾರ್ಯ ನಡೆಯಬೇಕೆಂಬ ಗ್ರಾಮಸ್ಥರ ಕೂಗಿಗೆ ಈ ತನಕ ಯಾವುದೆ ಉತ್ತರ ದೊರಕಿಲ್ಲ. ಸರ್ವ ಋತು ಓಡಾಟಕ್ಕೆ ಅನುಕೂಲವಾಗುವಂತೆ ಸೇತುವೆ ಬೇಡಿಕೆಯನ್ನು ಕೂಡಲೆ ಪರಿಗಣಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಪ್ರವಾಸಿಗರು ದಿನೇ ದಿನೇ ಹೆಚ್ಚುತ್ತಿದ್ದು ಕಿರಿದಾದ ಸೇತುವೆಯಲ್ಲಿ ಕಾರು, ಟಿ,ಟಿವಾಹನಗಳನ್ನು ದಾಟಿಸಿಕೊಂಡು ಬರುತ್ತಾರೆ ಆಯ ತಪ್ಪಿದರೆ ದೊಡ್ಡ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇರುವುದರಿಂದ ಸೇತುವೆಯ ಬೇಡಿಕೆಯನ್ನು ಜನ ಮುಂದಿಡುತ್ತಿದ್ದಾರೆ ಒಂದೊಮ್ಮೆ ಈ ಬೇಡಿಕೆ ಈಡೆರದಿದ್ದಲ್ಲಿ ಮುಂದಿನ ದಿನದಲ್ಲಿ ಹೋರಾಟದ ಮಾರ್ಗ ಅನಿವಾರ್ಯವೆಂದೂ ಗ್ರಾಮದ ಜನರು ಎಚ್ಚರಿಕೆ ನೀಡಿದ್ದಾರೆ ಎಂದು ಸುದ್ದಿ ನ್ಯೂಸ್ ಗೆ ಜಯರಾಮ್ ನೆಲ್ಲಿತ್ತಾಯ ತಿಳಿಸಿದ್ದಾರೆ.