Site icon Suddi Belthangady

ಉಜಿರೆಯಲ್ಲಿ ಸುವರ್ಣವಾಹಿನಿ ತಂಡದ ಮೇಲೆ ಹಲ್ಲೆ-ತಿಮರೋಡಿ, ಮಟ್ಟಣ್ಣನವರ್, ಸಮೀರ್, ಜಯಂತ್ ವಿರುದ್ಧ ಎಫ್.ಐ.ಆರ್

ಉಜಿರೆ: ಧರ್ಮಸ್ಥಳದಲ್ಲಿ ಯೂ ಟ್ಯೂಬರ್ಸ್ ಮೇಲೆ ನಡೆದಿದ್ದ ಹಲ್ಲೆ ವಿಚಾರದಲ್ಲಿ ವರದಿಗಾಗಿ ಆಸ್ಪತ್ರೆ ಬಳಿ ತೆರಳಿದ್ದ ಸುವರ್ಣವಾಹಿನಿ ತಂಡದ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ. ವರದಿಗಾರ ಹರೀಶ್ ಹಾಗೂ ಕ್ಯಾಮರಾಮೆನ್ ನವೀನ್ ಪೂಜಾರಿ ಮೇಲೆ ಹಲ್ಲೆ ನಡೆಸಿರುವ ಆರೋಪದಡಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಸಮೀರ್ ಎಂ.ಡಿ, ಜಯಂತ್ ಟಿ ಸೇರಿ ಹಲವರ ವಿರುದ್ದ ಎಫ್ಐಆರ್ ದಾಖಲಾಗಿದೆ.

ವರದಿಗಾರ ಹರೀಶ್ ನೀಡಿದ ದೂರಿನಡಿ ಬಿಎನ್ಎಸ್ 115(2), 189(2), 191(2), 351(2), 352, 190 ಸೆಕ್ಷನ್ ಗಳಡಿ ಎಫ್ಐಆರ್ ದಾಖಲಾಗಿದೆ.

Exit mobile version