Site icon Suddi Belthangady

ಸ. ಮಾ. ಶಾಲೆ ಬೆಳ್ತಂಗಡಿಯ ನೂತನ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಝಮಿರ್ ಸಅದಿ, ಉಪಾಧ್ಯಕ್ಷರಾಗಿ ಆರತಿ ಎಸ್. ಆಯ್ಕೆ

ಬೆಳ್ತಂಗಡಿ: ಮಾದರಿ ಶಾಲೆಯ 2025 ರಿಂದ 2028 ಸಾಲಿಗೆ ನೂತನ ಶಾಲಾ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಆ.8ರಂದು ನಡೆಯಿತು, ಅಧ್ಯಕ್ಷ ಗಾದಿಗೆ ನಡೆದ ಚುನಾವಣೆಯಲ್ಲಿ ಝಮೀರ್ ಸಹದಿ ಅವರು 10 ಮತಗಳನ್ನು ಪಡೆದು ಚುನಾಯಿತರಾದರು. ಇವರ ಪ್ರತಿ ಸ್ಪರ್ಧಿ ಹಾಲಿ ಅಧ್ಯಕ್ಷರಾಗಿದ್ದ ಚರಣ್ ಕುಮಾರ್ ಅವರು 6 ಮತಗಳನ್ನು ಪಡೆದರು ಹಾಗೂ ಉಪಾಧ್ಯಕ್ಷರಾಗಿ ಆರತಿ ಎಸ್ ಯಡಿಯೂರು ಅವಿರೋಧ ಆಯ್ಕೆಯಾದರು.

ನೀನಾಕುಮಾರ ಲಕ್ಷ್ಮೀಶ ದೇವಾಡಿಗ, ವಿಘ್ನೇಶ್ ಆಚಾರ್ಯ, ಗಣೇಶ್ ಗಾಣಿಗ, ಸಮೀವುಲ್ಲಾ, ಪ್ರಶಾಂತ್, ಅಸ್ಮ, ಸುಮಲತಾ, ಅಕ್ಷತಾ, ಚಂದನ, ಭವ್ಯ , ಶೋಭಾ, ಜೋಶ್ನಾ, ಜಲಜಾಕ್ಷಿ, ರೋಹಿಣಿ ನೂತನ ಸಮಿತಿ ಪದಾಧಿಕಾರಿಗಳಾಗಿ ಆಯ್ಕೆಯಾದರು. ನಗರ ಪಂಚಾಯತ್ ಮುಖ್ಯ ಅಧಿಕಾರಿ ಸಿ. ರಾಜೇಶ್, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾ ಅಧಿಕಾರಿ ಬಸವಲಿಂಗಪ್ಪ, ಶಾಲಾ ಮುಖ್ಯೋಪಾಧ್ಯಾಯರು ಶಿಕ್ಷಕರಿಂದ ಚುನಾವಣೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

Exit mobile version