ಕುಕ್ಕೇಡಿ: ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಸೇವಾ ಸಮಿತಿ ಕುಂಡದಬೆಟ್ಟು. ಕುಕ್ಕೇಡಿ ನಿಟ್ಟಡೆ, ಬಿಲ್ಲವ ಮಹಿಳಾ ವೇದಿಕೆ ಹಾಗೂ ಯುವ ಬಿಲ್ಲವ ವೇದಿಕೆ ಹಾಗೂ ಯುವವಾಹಿನಿ ಸಂಚಾಲನ ಸಮಿತಿ ಆಟಿದ ಅಟಿಲ್ದ ಕೂಟ ಕಾರ್ಯಕ್ರಮ ಆ.3ರಂದು ಕುಕ್ಕೇಡಿ ಡಾ.ಬಿ. ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.ಆಟಿ ತಿಂಗಳ ಸೊಬಗನ್ನು ತಾಲ್ಲೂಕು ಯುವಬಿಲ್ಲವ ವೇದಿಕೆಯ ಅಧ್ಯಕ್ಷ ಎಂ. ಕೆ. ಪ್ರಸಾದ್ ವರ್ಣಿಸಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಕಾರ್ಯಕ್ರಮ ಭಾಗವಹಿಸಿ ಶುಭ ಹಾರೈಸಿ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಿದರು. ತಾಲ್ಲೂಕು ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ಸುಮತಿ ಪ್ರಮೋದ್ ಶುಭ ಹಾರೈಸಿದರು.
ವೇದಿಕೆಯಲ್ಲಿ ವೇಣೂರು ಯುವವಾಹಿನಿ ಘಟಕದ ಅಧ್ಯಕ್ಷ ಶುಭಕರ ಪೂಜಾರಿ, ನಿಯೋಜಿತ ಅಧ್ಯಕ್ಷ ಪ್ರಕಾಶ್ ಕೋಟ್ಯಾನ್, ಬೆಳ್ತಂಗಡಿ ಘಟಕದ ಅಧ್ಯಕ್ಷ ಗುರುರಾಜ್ ಗುರಿಪಳ್ಳ, ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಮಂಜೂಲೋಕ್ಕು, ಯುವಬಿಲ್ಲವ ವೇದಿಕೆಯ ಅಧ್ಯಕ್ಷ ಸಂತೋಷ್ ಹಚ್ಚೇವು, ಮಹಿಳಾ ವೇದಿಕೆಯ ಅಧ್ಯಕ್ಷೆ ಹರಿಣಾಕ್ಷಿ ಪಾಲ್ಡ್ರೋಡಿ ಉಪಸ್ಥಿತರಿದ್ದರು. ಸಂಘ ಅಧ್ಯಕ್ಷ ಪುರುಷೋತ್ತಮ ಪೂಜಾರಿ ಅಧ್ಯಕ್ಷತೆಯಲ್ಲಿ ಜರಗಿದ ಈ ಕಾರ್ಯಕ್ರಮವನ್ನು ತಾಲೂಕು ಸಂಘದ ಪ್ರಧಾನ ಕಾರ್ಯದರ್ಶಿ ನಿತೀಶ್ ಎಚ್. ನಿರೂಪಿಸಿದರು. ಸಭಾಕಾರ್ಯಕ್ರಮದ ಮೊದಲು ವಿವಿಧ ಮನೋರಂಜನಾ ಕ್ರೀಡಾಕೂಟಗಳನ್ನು ಏರ್ಪಡಿಸಲಾಯಿತು. ಸುಮಾರು 40ಕ್ಕೂ ಅಧಿಕ ಬಗೆಯ ಆಟಿಯ ಖಾದ್ಯಗಳನ್ನು ತಯಾರಿಸಿ ತಂದ ಎಲ್ಲಾ ಮಹಿಳೆಯರನ್ನು ಗೌರವಿಸಲಾಯಿತು. ಪ್ರಶಾಂತ್ ಪಡಿಯ್ಯೋಡಿ ಧನ್ಯವಾದವಿತ್ತರು.