Site icon Suddi Belthangady

ಕಕ್ಕಿಂಜೆ: ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭ

ಬೆಳ್ತಂಗಡಿ: ರಾಜ್ಯ ಸರ್ಕಾರದ ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೌಲಾನಾ ಆಜಾದ್ ಮಾದರಿ ಶಾಲೆಯನ್ನು ರಾಜ್ಯ ಸರ್ಕಾರ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಕ್ಕಿಂಜೆಗೆ ಮಂಜೂರುಗೊಳಿಸಿದ್ದು, 2025-26ನೇ ಶೈಕ್ಷಣಿಕ ಸಾಲಿನ ಪ್ರವೇಶೋತ್ಸವ ಕಾರ್ಯಕ್ರಮ ನಡೆಯಿತು. ನೂತನವಾಗಿ ಪ್ರಾರಂಭವಾದ ಶಾಲೆಗೆ ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ವತಿಯಿಂದ ಟೇಬಲ್ ಮತ್ತು ಪೀಠೋಪಕರಣಗಳನ್ನು ಅಧ್ಯಕ್ಷ ರಕ್ಷಿತ್ ಶಿವರಾಂ ಹಸ್ತಾಂತರಿಸಿ, ಚಾರ್ಮಾಡಿ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳ ಬಡವರ ಮಕ್ಕಳು ಈ ಶಾಲೆಯಲ್ಲಿ ಉತ್ತಮ ರೀತಿಯ ಆಂಗ್ಲ ಮಾದ್ಯಮ ಶಿಕ್ಷಣ ಪಡೆಯಲಿ ಎಂದು ಶುಭ ಹಾರೈಸಿದರು.

ಶಾಲೆಯಲ್ಲಿ ಇರುವ ಮೀಸಲಾತಿ ವಿವರ ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ, ಕ್ರಿಶ್ಚಿಯನ್, ಜೈನರು, ಬೌದ್ಧ, ಸಿಖ್ ಮತ್ತು ಪಾರ್ಸಿ ಸಮುದಾಯದ ವಿದ್ಯಾರ್ಥಿಗಳಿಗೆ ಶೇಕಡ.75 ರಷ್ಟು ಸೀಟುಗಳು
ಎಸ್‌.ಸಿ, ಎಸ್‌.ಟಿ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಶೇ.25ರಷ್ಟು ಸೀಟುಗಳು ಲಭ್ಯವಿರಲಿದೆ.

ಶಾಲಾ ಪ್ರವೇಶೋತ್ಸವ ಸಂದರ್ಭದಲ್ಲಿ, ಜಿಲ್ಲಾ ಅಲ್ಪಸಂಖ್ಯಾತ ಅಧಿಕಾರಿ ಜಿನೇಂದ್ರ ಕೋಟ್ಯಾನ್, ಅಲ್ಪಸಂಖ್ಯಾತ ಕಚೇರಿಯ ಪ್ರಥಮ ದರ್ಜೆ ಸಹಾಯಕರಾದ ಮಂಜುನಾಥ್ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಸನಬ್ಬ ಚಾರ್ಮಾಡಿ, ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯ ಪ್ರದೀಪ್ ಕೆ.ಸಿ., ನೆರಿಯ ಗ್ರಾಮ ಪಂಚಾಯತ್ ಸದಸ್ಯರಾದ ಅಶ್ರಪ್ ನೆರಿಯ, ಆಸಿಫ್, ರಹೀಂ., ಪ್ರಮುಖರಾದ ಇಲಿಯಸ್ ಅಹ್ಮದ್, ಯಶೋಧರ ಪೂಜಾರಿ, ರತ್ನಾಕರ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಅಹಮದ್ ಕಕ್ಕಿಂಜೆ, ಶಾಲಾ ಮುಖ್ಯೋಪಾಧ್ಯಾಯ ಉಮರಬ್ಬ, ಮೊಹಿದ್ದೀನ್ ಜುಮ್ಮಾ ಮಸೀದಿಯಾ ಉಪಾಧ್ಯಕ್ಷ, ಎ.ರಹಿಮಾನ್, ಪ್ರವೀಣ್ ಹಳ್ಳಿ ಮನೆ, ಪೋಷಕರು ಹಾಗೂ ಊರಿನ ನಾಗರಿಕರು ಉಪಸ್ಥಿತರಿದ್ದರು.

Exit mobile version