Site icon Suddi Belthangady

ಬೆಳ್ತಂಗಡಿ ವಿಧಾನ ಸಭಾ ಕುಲಾಲ ಕುಂಬಾರ ವೇದಿಕೆಯ ನೂತನ ಅಧ್ಯಕ್ಷರಾಗಿ ಅವಿನಾಶ್ ಕುಲಾಲ್, ಕಾರ್ಯದರ್ಶಿಯಾಗಿ ತಿಲಕ್ ರಾಜ್ ಆಯ್ಕೆ

ಬೆಳ್ತಂಗಡಿ: ತಾಲೂಕಿನ ಕುಲಾಲ ಕುಂಬಾರ ಸಂಘದ ಅಧ್ಯಕ್ಷ, ಕಾರ್ಯದರ್ಶಿ ಆಯ್ಕೆಯು ಆ.5 ರಂದು ಮಂಗಳೂರಿನಲ್ಲಿ ನಡೆಯಿತು. ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ ಇದರ ಬೆಳ್ತಂಗಡಿ ವಿಧಾನ ಸಭಾ ಘಟಕದ ನೂತನ ಅಧ್ಯಕ್ಷರಾಗಿ ಅವಿನಾಶ್ ಕುಲಾಲ್ ಮಣೂರು, ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ತಿಲಕ್ ರಾಜ್, ಉಪಾಧ್ಯಕ್ಷರಾಗಿ ತಾರನಾಥ ಕುಲಾಲ್ ಅವರನ್ನು ಜಿಲ್ಲಾಧ್ಯಕ್ಷ ರಾದ ಲ! ಅನಿಲ್ ದಾಸ್ ರವರು ಆಯ್ಕೆಮಾಡಿದರು.

ಮಾಜಿ ಪ್ರಧಾನ ಕಾರ್ಯದರ್ಶಿ ಲೋಕೇಶ್ ಕುಲಾಲ್, ತಾಲೂಕು ಸಂಘದ ಅಧ್ಯಕ್ಷ ಉಮೇಶ್ ಕುಲಾಲ್, ಯುವ ವೇದಿಕೆಯ ಸದಸ್ಯ ಪ್ರಕಾಶ್ ಕುಲಾಲ್, ಜಿಲ್ಲಾ ಸಂಘದ ಸದಸ್ಯರೊಂದಿಗೆ ಆಯ್ಕೆ ಮಾಡಲಾಯಿತು. ತಾಲೂಕು ಸಂಘದ ಅಧ್ಯಕ್ಷ ಹರೀಶ್ ಕಾರಿಂಜ ಶುಭ ಹಾರೈಸಿದರು.

Exit mobile version