Site icon Suddi Belthangady

ಧರ್ಮಸ್ಥಳ ಪ್ರಕರಣ: ಜಯಂತ್ ಟಿ. ದೂರು- ಎಸ್.ಐ.ಟಿ ತನಿಖೆಗೆ ಹಸ್ತಾಂತರ

ಬೆಳ್ತಂಗಡಿ: ಇಚಿಲಂಪಾಡಿ ನಿವಾಸಿ ಜಯಂತ್ ಎಂಬವರು ಧರ್ಮಸ್ಥಳ ಗ್ರಾಮದಲ್ಲಿ 15 ವರ್ಷದ ಬಾಲಕಿಯ ಶವವನ್ನು ಯಾವುದೇ ಕಾನೂನು ಪ್ರಕ್ರಿಯೆ ನಡೆಸದೆ ಹೂತು ಹಾಕಲಾಗಿದೆ ಎಂದು ಆರೋಪಿಸಿ ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ 200/DPS/2025 ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಿನಾಂಕ 1.08.2025 ರಂದು ವರದಿಯಾಗಿದ್ದ ಯು.ಡಿ.ಆ‌ರ್ ಸಂಖ್ಯೆ: 35/2025, 00: 174 (3) & (VI) 2…2 ಪ್ರಕರಣ ಹಾಗೂ ದಿನಾಂಕ:04.08.2025ರಂದು ವರದಿಯಾಗಿದ್ದ 200/DPS/2025 ದೂರರ್ಜಿಯನ್ನು,, ಮುಂದಿನ ವಿಚಾರಣೆಗಾಗಿ ಎಸ್.ಐ.ಟಿ ತಂಡಕ್ಕೆ ಹಸ್ತಾಂತರಿಸುವಂತೆ ಕರ್ನಾಟಕ ರಾಜ್ಯದ ಮಾನ್ಯ ಡಿ.ಜಿ.ಪಿ & ಐ.ಜಿ.ಪಿ ರವರು ಅದೇಶಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಆ.4ರಂದು ಧರ್ಮಸ್ಥಳ ಠಾಣೆಯಲ್ಲಿ ಇಚಿಲಂಪಾಡಿ ನಿವಾಸಿ ಜಯಂತ್ ಅವರು ನೀಡಿದ ದೂರು ಪ್ರಕರಣ ಹಾಗೂ ಅನಾಮಿಕ ದೂರುದಾರ ಗುರುತಿಸಿದ 6ನೇ ಸ್ಥಳದಲ್ಲಿ ದೊರೆತ ಶವದ ಅವಶೇಷಗಳ ಬಗ್ಗೆ ಆ.1ರಂದು ಧರ್ಮಸ್ಥಳ ಠಾಣೆಯಲ್ಲಿ ದಾಖಲಾದ ಯು.ಡಿ.ಆರ್ ಪ್ರಕರಣವನ್ನು ಮುಂದಿನ ವಿಚಾರಣೆಗಾಗಿ ಕರ್ನಾಟಕ ರಾಜ್ಯದ ಡಿ.ಜಿ.ಪಿ ಮತ್ತು ಐ.ಜಿ.ಪಿಯವರು ಆದೇಶದಂತೆ ಎಸ್.ಐ.ಟಿ ತನಿಖೆಗೆ ಹಸ್ತಾಂತರಿಸಬೇಕಾಗಿದೆ.

Exit mobile version