Site icon Suddi Belthangady

ನಾಲ್ಕನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಶಿಬರಾಜೆ ಅಂಗನವಾಡಿಗೆ ಫ್ಯಾನ್ ಕೊಡುಗೆ

ಶಿಬರಾಜೆ: ಜು.5ರಂದು ಡೆಮ್ಮೆಜಾಲ್ ಗೊಲಿತೊಟ್ಟು ಕುಶಾನಿ ಶೆಟ್ಟಿಯ ನಾಲ್ಕನೇ ವರ್ಷದ ಹುಟ್ಟುಹಬ್ಬದ ಅಚರಣೆಯ ಪ್ರಯುಕ್ತ ತಾಯಿ ನಿಷ್ಮಿತಾ ಶೆಟ್ಟಿ, ತಂದೆ ಸಂದೇಶ್ ಶೆಟ್ಟಿ, ಅಜ್ಜ ಶಿವರಾಮ್ ರೈ
ಅವರು ಹುಟ್ಟುಹಬ್ಬ ಆಚರಣೆಗೆ ವಿಭಿನ್ನ ರೀತಿಯಲ್ಲಿ ಆಚರಿಸಿದರು. ಶಿಬರಾಜೆ ಪಾದೆಯ ಅಂಗನವಾಡಿ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಣೆ ಮಾಡಿಕೊಂಡು ಅಲ್ಲಿಗೆ ಉಪಯುಕ್ತವಾಗುವಂತೆ ಹೊಸ ಪ್ಯಾನ್‌ ಕೊಡುಗೆಯಾಗಿ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಅಂಗನವಾಡಿ ಶಿಕ್ಷಕಿ, ಸಹಾಯಕಿ ಹಾಗೂ ಸ್ಥಳೀಯರು ಭಾಗವಹಿಸಿದ್ದರು. ಈ ಕೊಡುಗೆ ಕಾರ್ಯಕ್ರಮವು ಇತರರಿಗೆ ಪ್ರೇರಣೆಯಾಗುತ್ತದೆ ಎಂಬ ಆಶಯವನ್ನು ಸಂಘಟಕರು ವ್ಯಕ್ತಪಡಿಸಿದ್ದಾರೆ.

Exit mobile version