Site icon Suddi Belthangady

ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆಯಿಂದ ಶ್ರಮದಾನ

ಸುಲ್ಕೇರಿಮೊಗ್ರು: ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ವತಿಯಿಂದ ಸುಲ್ಕೇರಿಮೊಗ್ರುವಿನಿಂದ ಅಳದಂಗಡಿಯವರೆಗೆ ರಸ್ತೆ ಬದಿಯ ರಿಪೇರಿಯನ್ನು ಶ್ರಮದಾನದ ಮೂಲಕ ಮಾಡಲಾಯಿತು.

ಶ್ರಮದಾನದಲ್ಲಿ ಸಂಘದ ಗೌರವ ಸಲಹೆಗಾರ ಗುರುವಪ್ಪ ಪೂಜಾರಿ ಪಟ್ಲ, ಹೆಚ್. ರಾಮಪ್ಪ, ಸಣ್ಣ ಪಟ್ಲ ಸಂಘದ ಅಧ್ಯಕ್ಷ ಸಂಕೇತ್ ಬಂಗೇರ, ಕಾರ್ಯದರ್ಶಿ ವಿಜಯ್ ಕುಮಾರ್, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ನಂದನ್ ಕುಮಾರ್, ಕಾರ್ಯದರ್ಶಿ ಸಚಿನ್ ಮಾಂತ್ಯೋಲು, ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ಶಕುಂತಲಾ, ಕಾರ್ಯದರ್ಶಿ ಮಮತ, ಸಂಘದ ಪದಾಧಿಕಾರಿಗಳು, ಬೈಲುವಾರು ಸಮಿತಿಯ ಪದಾಧಿಕಾರಿಗಳು ಹಾಗೂ ಸಂಘದ ಎಲ್ಲಾ ಸದಸ್ಯರು ಭಾಗವಹಿಸಿದರು. ಸದಸ್ಯರಿಗೆ ಬೆಳಗಿನ ಉಪಹಾರವನ್ನು ಪಟ್ಲ ಗುರುವಪ್ಪ ಪೂಜಾರಿ ನೀಡಿ ಸಹಕರಿಸಿದರು.

Exit mobile version