Site icon Suddi Belthangady

ಬೆಳ್ತಂಗಡಿ: ಸ್ಕ್ರೀನ್ ಪ್ರಿಂಟ್ ಮಾಲಕ ಬಿ.ಕೆ. ಹರಿಪ್ರಸಾದ್ ಆಚಾರ್ಯ ನಿಧನ

ಬೆಳ್ತಂಗಡಿ: ಸ್ಕ್ರೀನ್ ಪ್ರಿಂಟ್ ಮಾಲಕ, ಹಂಸ ಫರ್ನಿಚರ್ ಮಾಲಕ ಸತೀಶ್ ಆಚಾರ್ಯ ಅವರ ಸಹೋದರ ಬಿ.ಕೆ. ಹರಿಪ್ರಸಾದ್ (58ವ) ಅವರು ಆ.4ರಂದು ತಡರಾತ್ರಿ ಹೃದಯಾಘಾತದಿಂದ ಗುರುವಾಯನಕೆರೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಶ್ರೀ ವಿಶ್ವಕರ್ಮಾಭ್ಯುದಯ ಸಭಾ ಬೆಳ್ತಂಗಡಿ ಇದರ ಕಾರ್ಯಕಾರಿ ಸಮಿತಿಯ ಸಕ್ರಿಯ ಸದಸ್ಯರಾಗಿದ್ದರು.

ಕಳೆದ ತಡರಾತ್ರಿ ತೀವ್ರ ತರಹದ ಎದೆನೋವು ಕಾಡತೊಡಗಿದಾಗ ಮನೆಯವರು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು. ಮೃತರು ಪತ್ನಿ ಉಷಾ, ಮಕ್ಕಳಾದ ಹರ್ಷಿತ್ ಮತ್ತು ತೇಜಸ್ ರವರನ್ನು ಅಗಲಿದ್ದಾರೆ.

Exit mobile version