ಗುರುವಾಯನಕೆರೆ: ಸಂಸ್ಕೃತಿಯ ಪಾಲನೆಯತ್ತ ಹೊಸ ಬೆಳಕನ್ನು ಹರಡುವ ನಿಟ್ಟಿನಲ್ಲಿ ವೇದವ್ಯಾಸ ಶಿಶು ಮಂದಿರದ ವತಿಯಿಂದ ಆಟಿದ ಕೂಟ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಮುಂಡಕೋಡಿ, ಪೆರ್ಲ ಶಾಲೆಯ ಮುಖ್ಯ ಶಿಕ್ಷಕಿ ಸೇವಂತಿ ಬಿ.ಕೆ. ಚೆನ್ನೆಮಣೆ ಆಡುವ ಮುಖಾಂತರ ಕಾರ್ಯಕ್ರಮವನ್ನ ಉದ್ಘಾಟಿಸಿ ತುಳುನಾಡಿನಲ್ಲಿ ಆಟಿ ತಿಂಗಳಲ್ಲಿ ನಡೆಯುವ ವಿವಿಧ ಪದ್ಧತಿಯ ಬಗ್ಗೆ ಹಾಗೆ ಆಟಿ ತಿಂಗಳಲ್ಲಿ ಮಾಡುವ ವಿವಿಧ ತಿಂಡಿ ತಿನಿಸುಗಳ ಬಗ್ಗೆ ತಿಳಿಸುವ ಮೂಲಕ ಮುಂದಿನ ಮಕ್ಕಳಿಗೆ ಇದರ ಅರಿವನ್ನ ಮೂಡಿಸುವ ಅವಶ್ಯಕತೆ ಇದೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇದವ್ಯಾಸ ಶಿಶುಮಂದಿರದ ಆಡಳಿತ ಮಂಡಳಿಯ ಅಧ್ಯಕ್ಷೆ ಇಂದುಮತಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸುಮಾರು 28 ಬಗೆಯ ವಿವಿಧ ಖಾದ್ಯಗಳನ್ನು ಪೋಷಕರು ತಯಾರಿಸಿ ತಂದಿದ್ದರು. ಹಾಗೆ ಮಕ್ಕಳಿಗೆ ಮತ್ತು ಪೋಷಕರಿಗೆ ವಿವಿಧ ಬಗೆಯ ಆಟೋಟ ಸ್ಪರ್ಧೆಗಳನ್ನ ಶಿಶು ಮಂದಿರದ ಮಾತಾಜಿಗಳಾದ ಅಶ್ವಿನಿ ಮತ್ತು ರಮ್ಯಾ ಹಾಗೂ ಮಂಗಳ ರತ್ನಾಕರ್ ನಡೆಸಿಕೊಟ್ಟರು.
ಮಾತೃ ಮಂಡಳಿಯ ಕಾರ್ಯದರ್ಶಿ ಸ್ವಾತಿ ಸ್ವಾಗತಿಸಿದರು. ಆಡಳಿತ ಮಂಡಳಿಯ ಉಪಾಧ್ಯಕ್ಷೆ ಸುಧಾಮಣಿ ಕಾರ್ಯಕ್ರಮ ನಿರೂಪಿಸಿದರು. ಮಾತೃ ಮಂಡಳಿಯ ಅಧ್ಯಕ್ಷೆ ಮಮಿತಾ ಸುಧೀರ್ ವಂದಿಸಿದರು.