Site icon Suddi Belthangady

ಹಿರಿಯ ಯಕ್ಷಗಾನ ಕಲಾವಿದ, ನಿವೃತ್ತ ಶಿಕ್ಷಕ ಎಸ್. ಬಿ ನರೇಂದ್ರ ಕುಮಾರ್ ನಿಧನ

ಉಜಿರೆ: ಹಿರಿಯ ಯಕ್ಷಗಾನ ಕಲಾವಿದರು, ನಿವೃತ್ತ ದೈಹಿಕ ಶಿಕ್ಷಕರಾಗಿ ಹಲವಾರು ಕ್ರೀಡಾಪಟುಗಳಿಗೆ ಪ್ರೋತ್ಸಾಹಕರಾಗಿದ್ದ,ಧರ್ಮಸ್ಥಳ ಚಿಕ್ಕಮೇಳದ ಮೇಲುಸ್ತುವಾರಿಗಳಾಗಿದ್ದ ಎಸ್. ಬಿ. ನರೇಂದ್ರ ಕುಮಾರ್ (83ವ) ಆ.4ರಂದು ವಿಧಿವಶರಾಗಿದ್ದಾರೆ. ಅಸೌಖ್ಯದ ಹಿನ್ನಲೆಯಲ್ಲಿ ಮಂಗಳೂರಿನ‌ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಇವರು ಮಕ್ಕಳಾದ ಯಕ್ಷಗಾನ ಕಲಾವಿದ, ಪ್ರಾದ್ಯಾಪಕ ಶೃತ ಕೀರ್ತಿರಾಜ, ಉದ್ಯಮಿ ಸಿದ್ಧಾಂತ ಕೀರ್ತಿರಾಜ, ಮತ್ತು ಮಗಳು ಸುಪ್ರಿತಾ ರನ್ನು ಅಗಲಿದ್ದಾರೆ. ಇವರ ಅಂತ್ಯ ಸಂಸ್ಕಾರದ ವಿಧಿವಿಧಾನಗಳು ನಾಳೆ ಬೆಳಗ್ಗೆ 9ಗಂಟೆಗೆ ಗುರುವಾಯನಕೆರೆ ಬಸದಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ಸುದ್ದಿಬಿಡುಗಡೆಗೆ ತಿಳಿಸಿದ್ದಾರೆ.

Exit mobile version