Site icon Suddi Belthangady

ಧರ್ಮಸ್ಥಳ: ಶವಗಳನ್ನು ಹೂತಿಟ್ಟ ಪ್ರಕರಣ- ಇಂದು ಗುರುತಿಸಿದ ಹೊಸ ಜಾಗದಲ್ಲಿ ಪತ್ತೆಯಾದ ಶವದ ಅವಶೇಷ : ಕಾರ್ಯಾಚರಣೆ ಅಂತ್ಯ

ಧರ್ಮಸ್ಥಳ: ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆ.4ರಂದು 11ನೇ ಗುರುತಿನ ಪಕ್ಕದ ಗುಡ್ಡದಲ್ಲಿ ಹೊಸ ಜಾಗವನ್ನು ಮುಸುಕುಧಾರಿ ಗುರುತಿಸಿದ ಹಿನ್ನಲೆಯಲ್ಲಿ ಗುಡ್ಡದ ಮೇಲ್ಭಾಗಕ್ಕೆ ಅಧಿಕಾರಿಗಳು ತೆರಳಿದ್ದರು.

ಈ ವೇಳೆ ಪಾರ್ಥೀವ ಶರೀರದ ಅವಶೇಷಗಳು ಪತ್ತೆಯಾಗಿದ್ದು, ಅದು ಭೂಮಿಯ ಹೊರಭಾಗದಲ್ಲೇ ಇದ್ದ ಅಸ್ಥಿಪಂಜರ ಎನ್ನಲಾಗಿದೆ. ಇದನ್ನು ವಿಧಿವಿಜ್ಞಾನ ಇಲಾಖಾ ಅಧಿಕಾರಿಗಳು ಸಂಗ್ರಹಿಸಿ, ಪರೀಕ್ಷೆಗೆ ಒಳಪಡಿಸಲು ಸಂಗ್ರಹಿಸಿದ್ದಾರೆ. ಇನ್ನುಳಿದಂತೆ 11ನೇ ಗುರುತಿನ ಶೋಧ ಕಾರ್ಯ ನಾಳೆ ನಡೆಯಲಿದೆ.

Exit mobile version