Site icon Suddi Belthangady

ಅಧಾರ್‌ ನೊಂದಣಿ ಮತ್ತು ತಿದ್ದುಪಡಿ ಶಿಬಿರ

ಬೆಳ್ತಂಗಡಿ: ತಾಲೂಕು ಪಂಚಾಯತಿ ಬೆಳ್ತಂಗಡಿ ಮತ್ತು ಗ್ಯಾರಂಟಿ ಯೋಜನೆಗಳ ತಾಲೂಕು ಅನುಷ್ಟಾನ ಸಮಿತಿ ಮತ್ತು ಭಾರತೀಯ ಅಂಚೆ ಇಲಾಖೆ, ಪುತ್ತೂರು ಇವರ ಸಹಯೋಗದಲ್ಲಿ ಅಧಾರ್‌ ನೊಂದಣಿ ಮತ್ತು ತಿದ್ದುಪಡಿ ಶಿಬಿರವು ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಆ.4ರಂದು ಜರಗಿತು.

ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಗ್ಯಾರಂಟಿ ಯೋಜನೆಗಳ ತಾಲೂಕು ಮಟ್ಟದ ಸಮಿತಿ ಸದಸ್ಯ ಕಾರ್ಯದರ್ಶಿಯವರಾದ ಭವಾನಿಶಂಕರ್‌ ಎನ್‌ ಉಪಸ್ಥಿತಿಯಲ್ಲಿ ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಬಿ.ಪದ್ಮನಾಭ ಸಾಲ್ಯಾನ್‌ ರವರು ಶಿಬಿರವನ್ನು ಉದ್ಘಾಟಿಸಿದರು. ಬೆಸ್ಟ್‌ ಫೌಂಡೇಶನ್‌ ಅಧ್ಯಕ್ಷ ರಕ್ಷಿತ್‌ ಶಿವರಾಂ ರವರು ಕಾರ್ಯಕ್ರಮಕ್ಕೆ ಶುಭಕೋರಿದರು.
ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಸಮಿತಿಯ ಉಪಾಧ್ಯಕ್ಷ ಶೇಖರ್‌ ಕುಕ್ಕೇಡಿ, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಸುರೇಶ್‌ ವಿಟ್ಲ, ಭಾರತೀಯ ಅಂಚೆ ಇಲಾಖೆಯ ಪುತ್ತೂರು ವಿಭಾಗದ ಮಾರ್ಕೆಟಿಂಗ್‌ ಮ್ಯಾನೇಜರ್‌ ಗುರುಪ್ರಸಾದ್‌, ಯುವನಿಧಿ ಯೋಜನೆಯ ಜಿಲ್ಲಾ ತರಬೇತುದಾರರಾದ ಮಂಜುಷಾ ಹಾಗೂ ಗ್ಯಾರಂಟಿ ಯೋಜನೆಯ ತಾಲೂಕು ಅನುಷ್ಟಾನ ಸಮಿತಿಯ ಸದಸ್ಯರಾದ ನೇಮಿರಾಜ ಕಿಲ್ಲೂರು, ಸೌಮ್ಯ ಲಾಯಿಲ, ಮರಿಟಾ ಪಿಂಟೋ, ಶರೀಫ್‌ ಸಬರಬೈಲು, ಸತೀಶ್‌ ಹೆಗ್ಡೆ ವೇಣೂರು, ವಿಜಯ ಗೌಡ, ವಂದನಾ ಭಂಡಾರಿ, ವೀರಪ್ಪ ಮೊಯ್ಲಿ, ಕೇಶವ ನಾಯ್ಕ, ತಾಲೂಕು ಪಂಚಾಯತ್‌ ಅಧೀಕ್ಷಕರಾದ ಪ್ರಶಾಂತ್‌ ಡಿ. ಬಳಂಜ ಮತ್ತು ನೋಡೆಲ್‌ ಅಧಿಕಾರಿ ಹೆರಾಲ್ಡ್‌ ಸ್ವಿಕ್ವೇರಾ ಇವರು ಉಪಸ್ಥಿತರಿದ್ದರು.

ಅಂಚೆ ಇಲಾಖೆಯ ಮೇಲಂತಬೆಟ್ಟು ಶಾಖಾ ಅಂಚೆ ಮೇಲ್ವಿಚಾರಕಿ ಚೈತ್ರ, ಕೊಯ್ಯೂರು ಶಾಖಾ ಅಂಚೆ ಮೇಲ್ವಿಚಾರಕಿ ಸಂತೃಪ್ತಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಕಾರ್ಯವನ್ನು ನಡೆಸಿಕೊಟ್ಟರು.

ಸುಮಾರು ನೂರಕ್ಕೂ ಅಧಿಕ ಮಂದಿ ಶಿಬಿರದಲ್ಲಿ ಭಾಗವಹಿಸಿ ಅಧಾರ್‌ ನೊಂದಣಿ ಮತ್ತು ತಿದ್ದುಪಡಿಯನ್ನು ಮಾಡಿಸಿಕೊಂಡು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.

Exit mobile version