Site icon Suddi Belthangady

ಮೊಗ್ರು: ಶ್ರೀರಾಮ ಶಿಶು ಮಂದಿರದ ಮಕ್ಕಳ ಅನ್ನಯಜ್ಞಕ್ಕೆ ಸಿರಿ ಸಮೃದ್ಧಿ ನೇಜಿ ನೆಡುವ ಕಾರ್ಯಕ್ರಮ

ಮೊಗ್ರು: ಶ್ರೀರಾಮ ಶಿಶು ಮಂದಿರದ ಮಕ್ಕಳ ಅನ್ನಯಜ್ಞಕ್ಕೆ ಸಿರಿ ಸಮೃದ್ಧಿ ನೇಜಿ ನೆಡುವ ಕಾರ್ಯಕ್ರಮ ಗ್ರಾಮದ ಮುಗೇರಡ್ಕ ಪರಿಸರದ ಗೌಡತ್ತಿಗೆ ಗದ್ದೆಯಲ್ಲಿ ಆ. 3ರಂದು ನೆರವೇರಿತು. ಅಲೆಕ್ಕಿ ಜೈ ಶ್ರೀರಾಮ್ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಉದಯ ಭಟ್ ಸಭಾಧ್ಯಕ್ಷತೆ ವಹಿಸಿದ್ದರು. ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ನಾವು ವಿವಿಧ ರೀತಿಯ ಪರ್ಯಾಯ ಕೃಷಿಯನ್ನು ಅಳವಡಿಸಿಕೊಂಡಿದ್ದರೂ ಸಹ ನಮ್ಮ ಪರಿಸರಕ್ಕೆ ಸೂಕ್ತವಾದದ್ದು ಭತ್ತದ ಕೃಷಿ, ಅದನ್ನು ಮತ್ತಷ್ಟು ಪ್ರೋತ್ಸಾಹಿಸಿ ಉಳಿಸಿ ಬೆಳೆಸಬೇಕೆಂದರು.

ಮುಖ್ಯ ಅತಿಥಿಗಳಾದ ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಮಾಲಕ ಮೋಹನ್ ಕುಮಾರ್ ಅವರು ಮಾತನಾಡಿ ಶ್ರೀರಾಮ ಶಿಶುಮಂದಿರದಲ್ಲಿ ವಿದ್ಯೆ ಕಲಿಯುತ್ತಿರುವ ಚಿಣ್ಣರ ಅನ್ನದಾಸೋಹಕ್ಕಾಗಿ ಮಾಡುತ್ತಿರುವ ಈ ಕಾರ್ಯ ಶ್ಲಾಘನೀಯವೆಂದರು. ಪದ್ಮುಂಜ ಸಿಎ ಬ್ಯಾಂಕ್ ಅಧ್ಯಕ್ಷ ರಕ್ಷಿತ್ ಪಣೆಕ್ಕರ, ಮಡoತ್ಯಾರು ಶ್ರೀ ದುರ್ಗಾ ಇಂಡಸ್ಟ್ರೀಸ್ ಲ. ಉಮೇಶ್ ಶೆಟ್ಟಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಣಿಯೂರು ವಲಯ ಮೇಲ್ವಿಚಾರಕಿ ಶಿಲ್ಪಾ, ಮುಗೇರಡ್ಕ ಮೂವರು ದೈವಗಳ ದೈವಸ್ಥಾನ ಆಡಳಿತ ಮೊಕ್ತೇಸರ ಮನೋಹರ ಗೌಡ ಅಂತರ, ಪ್ರಗತಿಪರ ಕೃಷಿಕ ಚಂದ್ರಹಾಸ ಗೌಡ ದೇವಸ್ಯ, ಬಂದಾರು ಪಂಚಾಯತ್ ಸದಸ್ಯರಾದ ಗಂಗಾಧರ ಪೂಜಾರಿ, ಬಾಲಕೃಷ್ಣ ಗೌಡ ಮುಗೇರಡ್ಕ, ಅಲೆಕ್ಕಿ ಜೈ ಶ್ರೀರಾಮ್ ಸೇವಾ ಟ್ರಸ್ಟ್ ಅಧ್ಯಕ್ಷ ರಮೇಶ್ ಎನ್. ಉಪಸ್ಥಿತರಿದ್ದರು.

ಗದ್ದೆ ನೀಡಿದವರು ಶ್ರೀ ಕ್ಷೇತ್ರ ಮುಗೇರಡ್ಕ ಜಿನ್ನಪ್ಪ ಗೌಡ ಗೌಡತ್ತಿಗೆ, ಉಮಾವತಿ ಗೌಡ ಗೌಡತ್ತಿಗೆ, ಭೋಜನದ ವ್ಯವಸ್ಥೆ ಮನೋಹರ ಅಂತರ – ಮುಗೇರಡ್ಕ, ಸಹಕಾರ ಕೊರಗಪ್ಪ ಕೊಳಬ್ಬೆ, ನೇಜಿ ನೀಡಿದವರು ಧನ್ವಿತ್ ಪ್ರಶಾಂತ್ ಗೌಡ ಉರುಂಬುತ್ತಿಮಾರ್ ಪದ್ಮುಂಜ ಅವರು ಸಹಕರಿಸಿದರು.

ಟ್ರಸ್ಟ್ ನ ಪದಾಧಿಕಾರಿಗಳು, ಮಾತೃ ಮಂಡಳಿ, ಶಿಶು ಮಂದಿರ ಮಾತಾಜಿಯವರು, ಮಕ್ಕಳ ಪೋಷಕ ವೃಂದ, ಊರ -ಪರವೂರ ವಿದ್ಯಾಭಿಮಾನಿಗಳು ಕಾರ್ಯಕ್ರಮಕ್ಕೆ ಕೈ ಜೋಡಿಸಿದರು. ಮಕ್ಕಳ ಕೈಯಲ್ಲಿದೆ ನೇಜಿ ನಡೆಸಿದ್ದು ವಿಶೇಷವಾಗಿತ್ತು. ಶಿಶುಮಂದಿರ ಮಾತಾಜಿ ಪುಷ್ಪಲತಾ ಕಾರ್ಯಕ್ರಮ ಸ್ವಾಗತಿಸಿದರು. ಭರತೇಶ್ ಪಿ. ಪುಣ್ಕೆದಡಿ ನಿರೂಪಿಸಿದರು. ಬಾಲಕೃಷ್ಣ ಗೌಡ ಮುಗೇರಡ್ಕ ಧನ್ಯವಾದವಿತ್ತರು.

Exit mobile version