Site icon Suddi Belthangady

ಮೊಗ್ರು: ಅಲೆಕ್ಕಿ ಶ್ರೀರಾಮ ಶಿಶುಮಂದಿರದ ಮಾತೃ ಮಂಡಳಿಯಿಂದ ಆಟಿದ ಕೂಟ ಕಾರ್ಯಕ್ರಮ

ಮೊಗ್ರು: ಗ್ರಾಮದ ಅಲೆಕ್ಕಿ ಶ್ರೀರಾಮ ಶಿಶುಮಂದಿರದ ಮಾತೃ ಮಂಡಳಿಯಿಂದ ಆ. 2ರಂದು ಆಟಿದ ಕೂಟ ಕಾರ್ಯಕ್ರಮ ನೆರವೇರಿತು. ಅಲೆಕ್ಕಿ ಶ್ರೀರಾಮ್ ಸೇವಾ ಟ್ರಸ್ಟ್ ಅಧ್ಯಕ್ಷ ರಮೇಶ್ ಗೌಡ ನೆಕ್ಕರಾಜೆ, ಗೌರವಾಧ್ಯಕ್ಷ ಉದಯ ಭಟ್, ಅತಿಥಿಗಳಾಗಿ ಬಂದಾರು ಗ್ರಾಮ ಪಂಚಾಯತ್ ಸದಸ್ಯರಾದ ಗಂಗಾಧರ ಪೂಜಾರಿ, ಬಾಲಕೃಷ್ಣ ಗೌಡ ಮುಗೇರಡ್ಕ, ಮಾತೃ ಮಂಡಳಿಯ ಅಧ್ಯಕ್ಷೆ ಪೂರ್ಣಿಮಾ, ಕಾರ್ಯದರ್ಶಿ ಸ್ವಾತಿ ಮತ್ತು ಎಲ್ಲಾ ಮಾತೆಯರು ಹಾಗೂ ಮಾತಾಜಿಯವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಆಟಿದ ಕೂಟ ಕಾರ್ಯಕ್ರಮದಲ್ಲಿ ಮಾತೆಯರೆಲ್ಲ ಸೇರಿ ಸುಮಾರು 30 ಬಗೆಯ ವಿವಿಧ ತುಳುನಾಡ ವಿಶೇಷ ಖಾದ್ಯಗಳನ್ನು ತಯಾರಿಸಿ ತಂದು ಚಿಣ್ಣರು ಮತ್ತು ಆಗಮಿಸಿದ ಎಲ್ಲಾ ಅತಿಥಿಗಳಿಗೆ ಬಡಿಸಿದರು.
ತುಳುನಾಡ ವಿಶೇಷ ಆಟಗಳಾದ ಚೆನ್ನೇ ಮುಂತಾದ ಆಟಗಳನ್ನು ಮಾತೆಯರಿಂದ ಆಡಿಸಲಾಯಿತು.

Exit mobile version