ಬೆಳ್ತಂಗಡಿ: ಲಾಯಿಲ ಬಂಟರ ಗ್ರಾಮ ಸಮಿತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮವು ಲಾಯಿಲ ಗ್ರಾಮದ ಪೆರಿಂದಿಲೆ ಅಮ್ಮ ಸದನದಲ್ಲಿ ಆ.3ರಂದು ನಡೆಯಿತು. ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ ಭಂಡಾರಿಗುಡ್ಡೆ ಕಾರ್ಯಕ್ರಮ ಉದ್ಘಾಟಿಸಿ, ತಾಲೂಕಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಂಘಟನಾತ್ಮಕವಾಗಿ ಬಂಟ ಭಾಂದವರನ್ನು ಒಗ್ಗೂಡಿಸುವ ಕೆಲಸ ವಿವಿಧ ಗ್ರಾಮ ಸಮಿತಿಗಳು ಮಾಡುತ್ತಿರುವುದು ಶ್ಲಾಘನೀಯ ಕೆಲಸವಾಗಿದೆ. ಬಂಟ ಸಮಾಜ ಇತರ ಸಮಾಜದ ಬಂಧುಗಳ ಸಮಸ್ಯೆಗಳ ಕುಂದು ಕೊರತೆಗಳಿಗೆ ಸ್ಪಂದಿಸುವ ಕಾರ್ಯ ಮಾಡಬೇಕು ಎಂದರು.
ಪ್ರಕಾಶ್ ಶೆಟ್ಟಿ ನೊಚ್ಚ ಬಂಟ ಸಮಾಜದ ಆಹಾರ ಪದ್ಧತಿ ಆಚಾರ ವಿಚಾರ, ಸಂಸ್ಕ್ರತಿಗಳ ಬಗ್ಗೆ ಮಾತನಾಡಿ ನಮ್ಮ ಸಮಾಜದ ಮಕ್ಕಳಿಗೆ ನಮ್ಮ ಹಿರಿಯರು ಹಾಕಿಕೊಟ್ಟ ಕೆಲವೊಂದು ವಿಚಾರಗಳನ್ನು ತಿಳಿಸುವ ದೊಡ್ಡ ಜವಾಬ್ದಾರಿ ನಮಗಿದೆ. ಈ ಮೂಲಕ ಯುವ ಜನತೆಯನ್ನು ಸಮಾಜದಲ್ಲಿ ಮಾದರಿ ವ್ಯಕ್ತಿಯನ್ನಾಗಿಸುವಲ್ಲಿ ನಮ್ಮ ಪಾತ್ರ ಮಹತ್ವದ್ದು ಎಂದರು.
ಬಂಟರ ಸಂಘದ ಮಾಜಿ ಅಧ್ಯಕ್ಷ ವಿಠಲ ಶೆಟ್ಟಿ ಲಾಯಿಲ ಶುಭ ಹಾರೈಸಿದರು. ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಸಾಧಕರನ್ನು ಗೌರವಿಸಲಾಯಿತು. ಸುಮಾರು 62 ವಿವಿಧ ಬಗೆಯ ಆಹಾರ ಖಾಧ್ಯಗಳು ಎಲ್ಲರ ಗಮನ ಸೆಳೆಯಿತು. ಬಂಟ ಭಾಂಧವರಿಗೆ ಆಟೋಟ ಸ್ಪರ್ಧೆ ಏರ್ಪಡಿಸಿಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಸಮಿತಿ ಲಾಯಿಲ ಅಧ್ಯಕ್ಷ ಜನಾರ್ಧನ ಶೆಟ್ಟಿ ಪೆರಿಂದಿಲೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಜಯ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಅಧ್ಯಕ್ಷ ಅಜಿತ್ ಜಿ. ಶೆಟ್ಟಿ ಕೊರ್ಯರ್, ಬಂಟರ ವಲಯ ಸಮಿತಿ ಅಧ್ಯಕ್ಷ ಜಗನ್ನಾಥ್ ಶೆಟ್ಟಿ ಕರ್ನೊಡಿ, ಬಂಟರ ಸಂಘದ ಕೋಶಾಧಿಕಾರಿ ವಸಂತ ಶೆಟ್ಟಿ ಶ್ರದ್ದಾ ಲಾಯಿಲ, ಸದಾನಂದ ಶೆಟ್ಟಿ ಕರ್ನೊಡಿ, ಜಯಂತ ಶೆಟ್ಟಿ ಕುಂಠಿನಿ, ನವೀನ್ ಸಾಮಾನಿ, ಮಹಿಳಾ ವಿಭಾಗದ ಅಧ್ಯಕ್ಷೆ ಜಯಲಕ್ಷ್ಮಿ ಸಾಮಾನಿ, ಕಾರ್ಯದರ್ಶಿ ಶ್ರೇಯ ಪಿ. ಶೆಟ್ಟಿ, ಕೋಶಾಧಿಕಾರಿ ರಕ್ಷಿತಾ ಶೆಟ್ಟಿ, ಯುವ ವಿಭಾಗದ ಅಧ್ಯಕ್ಷ ಪ್ರತೀಕ್ ಶೆಟ್ಟಿ ನೊಚ್ಚ ಉಪಸ್ಥಿತರಿದ್ದರು. ಸುರೇಶ್ ಶೆಟ್ಟಿ ಕೊಡಿಯೇಲು ಕಾರ್ಯಕ್ರಮ ನಿರ್ವಹಿಸಿದರು. ಸುರೇಶ್ ಶೆಟ್ಟಿ ಲಾಯಿಲ, ಆಶೋಕ್ ಶೆಟ್ಟಿ ಲಾಯಿಲ, ಕಿಟ್ಟಣ್ಣ ಶೆಟ್ಟಿ ಎಣಿಂಜೆ ಸಹಕರಿಸಿದರು.