ಮುಂಡಾಜೆ: ತುಳುವರ ಸಂಸ್ಕ್ರತಿ ಆಚಾರ ವಿಚಾರ, ಆಹಾರ ಪದ್ದತಿ ವಿಭಿನ್ನವಾದದ್ದು, ತುಳು ಭಾಷೆ ಉಳಿದರೆ ಮಾತ್ರ ಇದೆಲ್ಲ ಉಳಿಯಲು ಸಾಧ್ಯ ಅದ್ದರಿಂದ ಈ ಕಾಲಘಟ್ಟದಲ್ಲಿ ತುಳು ನಾಡಿನ ತುಳು ಭಾಷೆಯ ಮಹತ್ವವನ್ನು ಯುವ ಜನರಿಗೆ ತಿಳಿಸುವ ಅವಶ್ಯಕತೆ ಹಿರಿಯರಾದ ನಮಗಿದೆ. ಎಂದು ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ ಎಣಿಂಜೆ ಅಭಿಪ್ರಾಯಪಟ್ಟರು. ಅವರು ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ, ಧರ್ಮಸ್ಥಳ ಸ್ವ ಸಹಾಯ ಸಂಘಗಳ ಒಕ್ಕೂಟ ವತಿಯಿಂದ ಆ. 3ರಂದು ಮುಂಡಾಜೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಕೃತಿದತ್ತವಾದ ಆಹಾರಗಳನ್ನು ನಮ್ಮ ಹಿರಿಯರು ಸೇವಿಸುತ್ತಿದ್ದುದರಿಂದ ಯಾವುದೇ ರೋಗವಿಲ್ಲದೇ ಹಲವಾರೂ ವರ್ಷ ನೆಮ್ಮದಿಯಿಂದ ಬಾಳಿ ಬದುಕುತಿದ್ದರು. ಅದರೆ ಬದಲಾದ ಈಗಿನ ಕಾಲಘಟ್ಟದಲ್ಲಿ ಆಹಾರದೊಟ್ಟಿಗೆ ವಿಷವನ್ನು ಸೇವಿಸುವ ಅನೀವಾರ್ಯ ಸ್ಥಿತಿಗೆ ನಾವು ಬಂದ್ದು ತಲುಪಿದ್ದೇವೆ. ಅದ್ದರಿಂದಲೇ ರೋಗದೊಂದಿಗೆ ನಾವು ಬದುಕುವಂತಾಗಿದೆ ಎಂದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉಜಿರೆ ಸ.ಹಿರಿಯ.ಪ್ರಾಥಮಿಕ ಶಾಲೆಯ ಶಿಕ್ಷಕ ಕೂಸಪ್ಪ ಗೌಡ ಮಾತನಾಡಿ, ತುಳುನಾಡಿನ ಆಹಾರ ಪದ್ಧತಿ, ನಮ್ಮ ಹಿರಿಯರು ಬದುಕುತಿದ್ದ ಶಿಸ್ತು ಬದ್ಧ ಜೀವನದ ಬಗ್ಗೆ ಮಾಹಿತಿ ನೀಡಿದ ಅವರು ಯುವಜನತೆ ಮೊಬೈಲ್ ದಾಸರಾಗುತ್ತಿರುವುದು ದುರಂತ, ನಾವೆಲ್ಲರೂ ನಮ್ಮ ಮಕ್ಕಳಿಗೆ ಸಂಸ್ಕಾರವನ್ನು ಕಲಿಸುವ ಕೆಲಸ ಚಿಕ್ಕಂದಿನಿಂದಲೇ ಮಾಡಬೇಕು. ಟಿ.ವಿ. ಮೊಬೈಲ್ ಹೆಚ್ಚು ನೋಡದಂತೆ ಜಾಗ್ರತೆ ವಹಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಅಧ್ಯಕ್ಷ ಶೀನಪ್ಪ ಗೌಡ ವಹಿಸಿದ್ದರು. ವೇದಿಕೆಯಲ್ಲಿ ಒಕ್ಕೂಟಗಳ ಪರವಾಗಿ ಹೇಮಾವತಿ, ಕಸ್ತೂರಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು. ಯಂಗ್ ಚಾಲೆಂಜರ್ಸ್ ಉಪಾಧ್ಯಕ್ಷ ವಿಜಯ ಕುಮಾರ್ ಸ್ವಾಗತಿಸಿದರು. ಸಂಚಾಲಕ ನಾಮದೇವ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಕೋಶಾಧಿಕಾರಿ ಸಾಂತಪ್ಪ ಧನ್ಯವಾದವಿತ್ತರು.