ಉಜಿರೆ: ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ವತಿಯಿಂದ ಬೆಳ್ತಂಗಡಿ ಯಕ್ಷ ಸಂಭ್ರಮ ಮತ್ತು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಸಹಕಾರದೊಂದಿಗೆ ಉಜಿರೆ ಜನಾರ್ದನ ದೇವಸ್ಥಾನದ ರಾಮಕೃಷ್ಣ ಸಭಾಂಗಣದಲ್ಲಿ ನಡೆದ ಮಹಿಳಾ ಯಕ್ಷ ಸಂಭ್ರಮ ಆ. 3ರಂದು ಸಮಾರೋಪ ಸಮಾರಂಭ ನಡೆಯಿತು. ಬೆಳಿಗ್ಗೆ ಮಹಿಳೆ ಮತ್ತು ತಾಳಮದ್ದಳೆ ಸಂಘಟನೆ, ಯಕ್ಷಗಾನ-ಸ್ತ್ರೀ ಅಭಿವ್ಯಕ್ತಿಯ ಹೊಸ ಸಾಧ್ಯತೆಗಳು, ಯಕ್ಷಗಾನ ಕಲಾವಿದರ ಪರಿವಾರದ ಮಹಿಳೆಯರು ವಿಚಾರದ ಬಗ್ಗೆ ವಿಚಾರ ಗೋಷ್ಠಿ, ಮೂಡಲಪಾಯ ಯಕ್ಷಗಾನ ಪ್ರದರ್ಶನ, ತಾಳಮದ್ದಳೆ ಉದಯನ್ನೋಖ ಮಹಿಳಾ ಭಾಗವತರ ಕೂಡುವಿಕೆಯಿಂದ ಗಾನವೈಭವ ನಡೆಯಿತು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಭಾಗವಹಿಸಿದ ಮಹಿಳಾ ಯಕ್ಷಗಾನ ಕಲಾವಿದರಿಗೆ ಸ್ಮರಣಿಕೆ ನೀಡಿ ಗೌರವಿಸಿ ಮಾತನಾಡಿದರು.
ಯಕ್ಷಗಾನ ಸಂಘಟಕ ಬಿ. ಭುಜಬಲಿ ಧರ್ಮಸ್ಥಳ, ಪ್ರೇರಣಾ ಮಹಿಳಾ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವಿನುತಾ ರಜತ ಗೌಡ, ಬೆಳ್ತಂಗಡಿ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿಜಯ ಲಕ್ಷ್ಮಿ, ಸುದ್ದಿ ಬಿಡುಗಡೆ ವರದಿ ಗಾರ ಜಾರಪ್ಪ ಪೂಜಾರಿ ಅತಿಥಿ ಗಳಾಗಿ ಭಾಗವಹಿಸಿದ್ದರು. ರಾಜೇಂದ್ರ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ದಯಾನಂದ ಪಿ. ಬೆಳಾಲು ಸ್ವಾಗತಿಸಿ ವಂದಿಸಿದರು.