ಬೆಳ್ತಂಗಡಿ: ದೆಹಲಿಯ ಕೆಂಪು ಕೋಟೆಯಲ್ಲಿ ಆ. 15ರಂದು ನಡೆಯುವ ಸ್ವಾತಂತ್ರೋತ್ಸವ ದಿನಾಚರಣೆ ಕಾರ್ಯಕ್ರಮಕ್ಕೆ ಆತ್ಮ ನಿರ್ಭರ ಯೋಜನೆಯಡಿಯಲ್ಲಿ ಉಜಿರೆ ಉತ್ತಮ ಗ್ರಾಮ ಪಂಚಾಯತ್ ಆಯ್ಕೆ ಯಾಗಿದ್ದು ವಿಶೇಷ ಅತಿಥಿಗಳಾಗಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಉಷಾ ಕಿರಣ್ ಕಾರಂತ್, ನೋಡಲ್ ಅಧಿಕಾರಿಯಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಿ. ಹೆಚ್. ಪ್ರಕಾಶ್ ಶೆಟ್ಟಿ ಅವರಿಗೆ ಆಮಂತ್ರಣ ಬಂದಿರುತ್ತದೆ.
ಇವರೊಂದಿಗೆ ಅಧ್ಯಕ್ಷ ಪತಿ ಅರವಿಂದ ಕಾರಂತ್, ಪ್ರಕಾಶ್ ಶೆಟ್ಟಿಯವರ ಪತ್ನಿ ಪ್ರವೀಣ ಶೆಟ್ಟಿ ಭಾಗವಹಿಸಲಿದ್ದಾರೆ.
ದೆಹಲಿಯ ಕೆಂಪುಕೋಟೆಯಲ್ಲಿ ನಡೆಯಲಿರುವ ಕಾರ್ಯಕ್ರಮ ಕ್ಕೆ ಕರ್ನಾಟಕ ರಾಜ್ಯದಿಂದ 7 ಗ್ರಾಮ ಪಂಚಾಯತಿ ಅಧ್ಯಕ್ಷರು ಅಥವಾ ಸದಸ್ಯರಿಗೆ ಮತ್ತು ಅವರ ಪತಿ/ ಪತ್ನಿಗೆ ಮತ್ತು ಇಬ್ಬರು ನೋಡಲ್ ಅಧಿಕಾರಿಗಳಿಗೆ ವಿಶೇಷ ಅತಿಥಿಗಳಾಗಿ ಭಾಗವಹಿಸುವ ಅವಕಾಶವಿದ್ದು ಅಧ್ಯಕ್ಷರು/ಸದಸ್ಯರುಗಳನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಕಾರ್ಯಕ್ರಮದ ನಂತರ ವಾಪಸ್ ಕರೆತರಲು ರಾಜ್ಯದಿಂದ ಉಜಿರೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಮತ್ತು ಕೊಡಗು ಜಿಲ್ಲೆಯ ಹುದೇರಿ ಗ್ರಾಮ ಪಂಚಾಯತ್ ಅಭಿನಂದನೆಗಳು ಅಭಿವೃದ್ಧಿ ಅಧಿಕಾರಿ ಪುಟ್ಟರಾಜು, ಇವರುಗಳನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಕಾರ್ಯಕ್ರಮಕ್ಕೆ ರಾಜ್ಯದಿಂದ ಒಟ್ಟು 17 ಮಂದಿ ಭಾಗವಹಿಸುವರು.