Site icon Suddi Belthangady

ಧರ್ಮಸ್ಥಳ: ಗ್ರಾಮದಲ್ಲಿ ಮತ್ತೊಂದು ಕೊಲೆಯಾಗಿದೆ-ಅದಕ್ಕೆ ಸಾಕ್ಷಿ ನನ್ನಲ್ಲಿದೆ-ಅಂದು ಪೊಲೀಸರು ಏನು ಮಾಡಿಲ್ಲ-ಇಂದು ಎಸ್.ಐ. ಟಿ ತಂಡದ ಮೇಲೆ ನಂಬಿಕೆಯಿಟ್ಟು ದೂರು ಕೊಡಲು ಬಂದಿದ್ದೇನೆ-ಜಯಂತ್ ಟಿ. ಹೇಳಿಕೆ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಕೆಲ ವರ್ಷಗಳ ಹಿಂದೆ ಮಹಿಳೆಯ ಕೊಲೆ ನಡೆದಿದೆ.‌ಅದಕ್ಕೆ ಸಾಕ್ಷಿಗಳು ನನ್ನಲ್ಲಿವೆ. ಆ ಸಂದರ್ಭದಲ್ಲಿ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಈಗ ಬಂದಿರುವ ಎಸ್.ಐ.ಟಿ ತಂಡದ ಮೇಲೆ ನಂಬಿಕೆಯಿರುವುದರಿಂದ ಇಂದು ಸಾಕ್ಷಿ ನೀಡಲು ಬಂದಿದ್ದೇನೆ ಎಂದು ಜಯಂತ್ ಟಿ. ಎಸ್.ಐ.ಟಿ ಕಚೇರಿಗೆ ದೂರು ನೀಡಲು ಬಂದಾಗ ಮಾಧ್ಯಮಗಳ ಮುಂದೆ ತಿಳಿಸಿದರು.

ಈಗಿರುವ ಎಸ್. ಐ. ಟಿ ತಂಡದ ಬಗ್ಗೆ ಅಪಾರ ನಂಬಿಕೆಯಿದೆ.‌ ಸೋಮವಾರ ದೂರು ನೀಡಲು ತಿಳಿಸಿದ್ದು, ಸೋಮವಾರ ಮತ್ತೆ ಬಂದು ದೂರು ನೀಡುತ್ತೇನೆ. ಪದ್ಮಲತಾ ಪ್ರಕರಣದ ಬಗ್ಗೆಯೂ ತನಿಖೆಯಾಗಬೇಕು. ಚಾರ್ಮಾಡಿ ಬಸ್ ತಳ್ಳಿ ಹಾಕಿರುವ ಪ್ರಕರಣವೂ ತನಿಖೆಯಾಗಬೇಕು, ಇನ್ನಷ್ಟು ಸಾಕ್ಷಿಗಳು ಬರಲಿದ್ದಾರೆ ಎಂದು ತಿಳಿಸಿದರು.

Exit mobile version