ಬೆಳ್ತಂಗಡಿ: ದಕ್ಷಿಣ ಕನ್ನಡ ಮತ್ತು ಉಡುಪಿ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಇಬ್ಬರು ಸರ್ಕಾರಿ ಆಪ್ತ ಕಾರ್ಯದರ್ಶಿಗಳನ್ನು ನೇಮಿಸಿದ್ದಾರೆ.
ಜಯಪ್ರಕಾಶ್ ಎಣ್ಣೆಮಜಲು ಹಾಗೂ ಅವಿನಾಶ್ ಬಿ.ಆರ್ ಅವರನ್ನು ಕಿಶೋರ್ ಕುಮಾರ್ ಅವರ ಆಪ್ತ ಕಾರ್ಯದರ್ಶಿಗಳಾಗಿ ನೇಮಕ ಮಾಡಲಾಗಿದೆ.
ಜಯಪ್ರಕಾಶ್ ಎಣ್ಣೆಮಜಲು ಅವರು ಸುಳ್ಯ ಮೂಲದವರು. ಇವರು ಮಾಜಿ ಕೇಂದ್ರ ಸಚಿವರಾದ ಡಿ.ವಿ. ಸದಾನಂದ ಗೌಡ ಅವರ ಆಪ್ತ ಸಹಾಯಕರಾಗಿ 15 ವರ್ಷಗಳ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಸರ್ಕಾರದ ಕಾರ್ಯವಿಧಾನ,ಇಲಾಖೆಗಳ ಮತ್ತು ಕಚೇರಿ ನಿರ್ವಹಣೆಗಳಲ್ಲಿ ಅನುಭವ ಹೊಂದಿರುವ ಇವರು ಬೆಂಗಳೂರಿನಲ್ಲಿ ಲಭ್ಯರಿರುತ್ತಾರೆ.
ಅವಿನಾಶ್ ಬಿ.ಆರ್. ಅವರು ಗ್ರಾಮ ಪಂಚಾಯತ್ ಮಟ್ಟದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಆಗಿ ಕೆಲಸ ಮಾಡಿದ ಅನುಭವವಿರುವವರು. ಜಾಗೃತಿ, ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಹಾಗೂ ಸ್ಥಳೀಯ ಆಡಳಿತದ ಕೆಲಸಗಳಲ್ಲಿ ನಿಪುಣರಾಗಿರುವ ಇವರನ್ನು ಮಂಗಳೂರು ಮತ್ತು ಉಡುಪಿ ಪ್ರದೇಶದಲ್ಲಿ ಲಭ್ಯವಿರುವಂತೆ ನೇಮಕ ಮಾಡಲಾಗಿದೆ.
ಕಚೇರಿಯಿಂದ ನಿರ್ವಹಿಸಲ್ಪಡುವ ಯಾವುದೇ ಕೆಲಸಗಳಿಗಾಗಿ, ಸಾರ್ವಜನಿಕರು ಹಾಗೂ ಅಧಿಕಾರಿಗಳು ಈ ಇಬ್ಬರನ್ನು ನೇರವಾಗಿ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜಯಪ್ರಕಾಶ ಎಣ್ಣೆಮಜಲು – 99804 94660 ( ಬೆಂಗಳೂರು )
ಅವಿನಾಶ್ ಬಿ ಆರ್ – 97417 60738 ( ದಕ್ಷಿಣ ಕನ್ನಡ ಮತ್ತು ಉಡುಪಿ )