ಶಿಶಿಲ: ಶ್ರೀ ಶಿಶಿಲೇಶ್ವರ ದೇವಸ್ಥಾನದ ನಿಷೇಧಿತ ಪ್ರದೇಶದಲ್ಲಿ ಮೀನು ಹಿಡಿಯಲು ಬಂದ ಇಬ್ಬರನ್ನು ಸ್ಥಳೀಯರು ಪತ್ತೆ ಹಚ್ಚಿದ ಪ್ರಕರಣ ಆ.1ರಂದು ರಾತ್ರಿ ನಡೆದಿದೆ.
ಶಿಶಿಲ ದೇವಸ್ಥಾನದ ಪರಿಸರದಲ್ಲಿ ದೇವರ ಮೀನುಗಳಿದ್ದು, ಈ ಪ್ರದೇಶದ ಎರಡು ಕಿ.ಮೀ ವ್ಯಾಪ್ತಿಯಲ್ಲಿ ಮೀನು ಹಿಡಿಯದಂತೆ ಸರಕಾರ ನಿಷೇಧವನ್ನು ಮಾಡಿದೆ. ಆ.1ರಂದು ರಾತ್ರಿ ಸುಮಾರು 10ಗಂಟೆ ರಾತ್ರಿ ಅನ್ಯಮತೀಯರಿಬ್ಬರು ನಿಷೇಧಿತ ಪ್ರದೇಶದಲ್ಲಿ ಮೀನು ಹಿಡಿಯಲು ಬಂದಿದ್ದರು. ರಾತ್ರಿ ನದಿ ಬದಿಯಲ್ಲಿ ಲೈಟ್ ಹಾಕುತ್ತಿರುವುದನ್ನು ಕಂಡ ಸ್ಥಳೀಯರು ಅಲ್ಲಿಗೆ ತೆರಳಿ ನೋಡಿದಾಗ ಇಬ್ಬರು ಮೀನು ಹಿಡಿಯಲು ಬಂದಿರುವುದು ಕಂಡು ಬಂದಿತ್ತು. ವಿಚಾರಿಸಿದಾಗ ತಾವು ಬಂದಾರು, ಕುಪ್ಪೆಟ್ಟಿಯಿಂದ ಮೀನು ಹಿಡಿಯಲು ಬಂದಿರುವುದಾಗಿ ತಿಳಿಸಿದ್ದರು. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಇಬ್ಬರನ್ನು ವಿಚಾರಿಸಿ ಎಚ್ಚರಿಕೆ ನೀಡಿ ಬಿಟ್ಟರೆಂದು ಸ್ಥಳೀಯರು ತಿಳಿಸಿದ್ದಾರೆ.