ಪಡಂಗಡಿ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುವ ಪ್ರಶಿಕ್ಷಣ ವರ್ಗದ ಪೂರ್ವ ತಯಾರಿ ಸಭೆ ಆ.1ರಂದು ಪಡಂಗಡಿ ಗಣಪತಿ ಮಂಟಪಯಲ್ಲಿ ನಡೆಯಿತು. ಜಿಲ್ಲಾ ಕಾರ್ಯದರ್ಶಿ ಸೀತಾರಾಮ್ ಬೆಳಾಲು ಪ್ರಶಿಕ್ಷಣ ವರ್ಗದ ಮಾಹಿತಿ ನೀಡಿ ಯಶಸ್ವಿಯಾಗಿ ನಡೆಸಲು ಸಲಹೆ ಸೂಚನೆ ಮಾರ್ಗದರ್ಶನ ನೀಡಿದರು.
ವೇದಿಕೆಯಲ್ಲಿ ಮಂಡಲದ ಕಾರ್ಯದರ್ಶಿ ಸಂತೋಷ ಕುಮಾರ್ ಜ್ಯೆನ್, ಗ್ರಾಮ ಪಂಚಾಯತ್ ಅದ್ಯಕ್ಷ ಪ್ರಶಾಂತ ಪೂಜಾರಿ, ಸಿ.ಎ. ಬ್ಯಾಂಕ್ ಅಧ್ಯಕ್ಷ ಅಂತೋಣಿ ಫೆರ್ನಾಂಡಿಸ್, ಹಾಲಿನ ಸೊಸೈಟಿ ಅದ್ಯಕ್ಷ ಸುಂದರ ಪೂಜಾರಿ ಹಾಗೂ ಪಂಚಾಯತ್ ಪ್ರಬಾರಿ ಜನಾರ್ದನ ಕುಕ್ಕೆಡಿ, ಬೂತ್ ಸಮಿತಿಯ ಅದ್ಯಕ್ಷ ಕಾರ್ಯದರ್ಶಿ, ಪಂಚಾಯತ್ ವ್ಯಾಪ್ತಿಯ ಪ್ರಮುಖರು, ಪಂಚಾಯತ್ ಉಪಾಧ್ಯಕ್ಷ ಸರ್ವ ಸದಸ್ಯರು. ಸಿ.ಎ. ಬ್ಯಾಂಕ್ ನಿರ್ದೇಶಕರು ಹಾಗೂ ಎಲ್ಲಾ ಪ್ರಮುಖರು ಭಾಗವಹಿಸಿದ್ದರು.