Site icon Suddi Belthangady

ಮಿಯಾರು: ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮೊದಲನೇ ವರ್ಷದ ಮಹಾಲಕ್ಷ್ಮೀ ವ್ರತ

ಪುದುವೆಟ್ಟು: ಮಿಯಾರು ಶ್ರೀ ವನದುರ್ಗಪರಮೇಶ್ವರಿ ದೇವಸ್ಥಾನದ ಆಶ್ರಯದಲ್ಲಿ ನಡೆದ ವರಮಹಾಲಕ್ಷ್ಮೀ ವ್ರತ ಪೂಜಾ ಕಾರ್ಯಕ್ರಮವು ವಿಜೃಂಭಣೆಯಿಂದ ನೆರವೇರಿತು.

ಈ ಕಾರ್ಯಕ್ರಮದಲ್ಲಿ ದೇವಸ್ಥಾನದ ಗೌರವಾಧ್ಯಕ್ಷ ರಮೇಶ್ ಪ್ರಭು ಉಜಿರೆ, ದೇವಸ್ಥಾನ ಸಮಿತಿ ಅಧ್ಯಕ್ಷ ಬೊಮ್ಮಣ್ಣ ಗೌಡ ಮಠ, ಕಾರ್ಯದರ್ಶಿ ಸಂತೋಷ ಕೆ. ಸಿ., ಕೋಶಾಧಿಕಾರಿ ಶಾಜು ಕೆ. ಆರ್., ಸದಸ್ಯರಾದ ಶುಭನಿತ, ಯೋಗೀಶ್ ಗೌಡ, ಹರಿನಾಕ್ಷಿ, ರಾಘವ ಪೂಜಾರಿ, ಸೋಮನಾಥ ಮುಲಿಮಜಲು, ಉಪಾಧ್ಯಕ್ಷರಾದ ಜನಾರ್ಧನ ದರ್ಕಾಸ್, ನಾರಾಯಣ ನಾಯ್ಕ, ವರಮಹಾಲಕ್ಷ್ಮಿ ಸಮಿತಿ ಅಧ್ಯಕ್ಷೆ ಮೋಹಿನಿ ಧರ್ಮರಾಜ, ಕಾರ್ಯದರ್ಶಿ ಸೀತಮ್ಮ ನಾರಾಯಣ ನಾಯ್ಕ, ಸದಸ್ಯರು ಹಾಗೂ ಎಸ್. ಕೆ. ಡಿ. ಆರ್. ಡಿ. ಪಿ. ಧರ್ಮಸ್ಥಳ ವಲಯ ಮೇಲ್ವಿಚಾರಕ ರವೀಂದ್ರ, ತಾಲೂಕು ಕೃಷಿ ಅಧಿಕಾರಿ ರಾಮಕುಮಾರ್, ಸೇವಾಪ್ರತಿನಿಧಿ ಚೈತ್ರ ಅವರ ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಕಾರ್ಯಕ್ರಮಕ್ಕೆ ಸೋಮನಾಥೇಶ್ವರ ದೇವಸ್ಥಾನ ಬೈಲಂಗಡಿ ಇದರ ಕಾರ್ಯದರ್ಶಿಯಾದ ಸನತ್ ಪೂಜಾರಿ ಭಾಗವಹಿಸಿದ್ದರು. ಹರೀಶ್ ಗೌಡ ಪಟ್ಲ ಅವರ ನೇತೃತ್ವದಲ್ಲಿ ಭಜನಾ ಕಮ್ಮಟ ದೇವಸ್ಥಾನದ ವಠಾರದಲ್ಲಿ ನಡೆಯಿತು. ಊರಿನ ಸಮಸ್ತ ನಾಗರಿಕರು ಮಹಿಳೆಯರು ಭಾಗವಹಿಸಿದರು.

Exit mobile version