ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ, ಸ್ಕೌಟ್ ಗೈಡ್ ವಿಶ್ವ ಸ್ಕಾಪ್೯ ದಿನಾಚರಣೆ ಹಾಗೂ ಸನ್ ರೈಸ್ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಜಿಲ್ಲಾ ಸಹಾಯಕ ಆಯುಕ್ತ ಬಿ. ಸೋಮಶೇಖರ್ ಶೆಟ್ಟಿ ಆಗಮಿಸಿದ್ದರು.
ಸ್ಕೌಟ್ ಗೈಡ್ ಸ್ಕಾರ್ಫ್ ತೊಡಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದ ಮುಖ್ಯ ಅತಿಥಿಗಳು ಸ್ಕೌಟ್ ಗೈಡ್ ಸಮಾಜದಲ್ಲಿ ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗಿದೆ. ಶಿಸ್ತು, ಜವಾಬ್ದಾರಿಯುತ ಕಾರ್ಯ, ನಾಯಕತ್ವ ಗುಣ ಮಕ್ಕಳಲ್ಲಿ ಬೆಳೆಯಬೇಕು ಸಮಾಜದಲ್ಲಿ ವಿದ್ಯಾರ್ಥಿಗಳು ಯಾವ ರೀತಿ ಬಾಳಬೇಕು ಎಂಬುದನ್ನು ಸ್ಕೌಟ್ ಗೈಡ್ ನಿಂದ ಕಲಿಯಬಹುದು ಎಂದು ತಿಳಿಸಿದರು.
ಮಕ್ಕಳು ಸ್ಕೌಟ್ ಗೈಡ್ ನಿಂದ ಪಡೆದ ಅನುಭವ, ಸ್ಕೌಟ್ ಗೈಡ್ ನೊಂದಿಗೆ ತನ್ನ ಪ್ರಯಾಣ ಇದರ ಬಗ್ಗೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಸ್ಕೌಟ್ಸ್ ಗೈಡ್ಸ್ ಪ್ರತಿಜ್ಞೆಯನ್ನು ಪುನರ್ ಉಚ್ಚರಿಸಿದರು.
ಕಿರು ನಾಟಕದ ಮೂಲಕ ಹಿರಿಯರಿಗೆ ಸಹಾಯ ಮಾಡುವ ಸಮುದಾಯ ಚಟುವಟಿಕೆಯ ಬಗ್ಗೆ ಮನವರಿಕೆ ಮಾಡಲಾಯಿತು. ವೇದಿಕೆಯಲ್ಲಿ ಮುಖ್ಯ ಶಿಕ್ಷಕಿ ಹೇಮಲತಾ ಎಂ. ಆರ್., ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಬೆಳ್ತಂಗಡಿಯ ಕಾರ್ಯದರ್ಶಿ ಪ್ರಮೀಳಾ ಪೂಜಾರಿ ಉಪಸ್ಥಿತರಿದ್ದರು.
ಸ್ಕೌಟ್ ಗೈಡ್ ಶಿಕ್ಷಕರುಗಳಾದ ನೀತಾ ಕೆ. ಎಸ್, ಕಾರುಣ್ಯ, ಗೀತ ಪಿ, ಜಯಲಕ್ಷ್ಮಿ, ಮಂಜುನಾಥ, ಜಯರಾಮ್ ,ರಮ್ಯಾ ,ಪ್ರಮೀಳಾ ಎನ್. ಸಹಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಗೈಡ್ ವಿದ್ಯಾರ್ಥಿ ಸಂಜನಾ ಸ್ವಾಗತಿಸಿದರು. ಪ್ರಮೀಳಾ ಪೂಜಾರಿ ಸಂಘಟಿಸಿದ ಕಾರ್ಯಕ್ರಮದಲ್ಲಿ ಗೈಡ್ ವಿದ್ಯಾರ್ಥಿ ಪ್ರಾಪ್ತಿ ವಿ. ಶೆಟ್ಟಿ ನಿರೂಪಿಸಿ, ಗೈಡ್ ವಿದ್ಯಾರ್ಥಿ ಪರಿಣಿತ ಧನ್ಯವಾದವಿತ್ತರು.