Site icon Suddi Belthangady

ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಣಕು ಸಂಸತ್ತು ಅಧಿವೇಶನ

ಉಜಿರೆ: ಅನುಗ್ರಹ ಅಂಗ್ಲ ಮಾಧ್ಯಮ ಶಾಲೆಯ ಹೈಯರ್ ಪ್ರೈಮರಿ ವಿಭಾಗದ ವಿದ್ಯಾರ್ಥಿಗಳು ಅಣಕು ಸಂಸತ್ತು ಅಧಿವೇಶನವನ್ನು ಶಾಲಾ ಸಭಾಂಗಣದಲ್ಲಿ ಯಶಸ್ವಿಯಾಗಿ ಜು.31ರಂದು ನಡೆಸಿದರು.

ಪ್ರಾಂಶುಪಾಲ ಫಾ. ವಿಜಯ್ ಲೋಬೋ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮವು ನಡೆಯಿತು. ಈ ಅಧಿವೇಶನದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಸ್ಪೀಕರ್, ಆಡಳಿತ ಪಕ್ಷ ವಿರೋಧ ಪಕ್ಷ ಹಾಗೂ ಸಂಸದ ಸದಸ್ಯರ ಪಾತ್ರವನ್ನು ನಿಭಾಯಿಸಿ ಸಂಸತ್ ಅಧಿವೇಶನದ ಕಾರ್ಯವಿಧಾನವನ್ನು ಸಜೀವವಾಗಿ ಪ್ರದರ್ಶಿಸಿದರು.

ಸಹ ಶಿಕ್ಷಕ ರವಿಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಅರಿವು ಮೂಡಿಸಲು ಸಹಾಯವಾಯಿತು. ಸಹ ಶಿಕ್ಷಕಿ ನಿಶಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಅರ್ಪಿಸಿದರು.

Exit mobile version