Site icon Suddi Belthangady

ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಮಂತ್ರಿ ಮಂಡಲದ ಮೊದಲ ಅಧಿವೇಶನ

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಮಂತ್ರಿ ಮಂಡಲದ ಮೊದಲ ಅಧಿವೇಶನವು ಜು. 31ರಂದು ಶಾಲಾ ಸಭಾಭವನದಲ್ಲಿ ನಡೆಯಿತು. ಈ ಅಧಿವೇಶನದಲ್ಲಿ ಶಾಲಾ ಮಂತ್ರಿ ಮಂಡಲದ ಆಡಳಿತ ಮಂಡಳಿಯ ಸದಸ್ಯರು ಮತ್ತು ವಿರೋಧ ಪಕ್ಷದ ಸದಸ್ಯರು ಕೆಲವು ವಿಷಯಗಳನ್ನು ಚರ್ಚಿಸುವುದರ ಮೂಲಕ ಈ ಅಧಿವೇಶನವನ್ನು ನಡೆಸಲಾಯಿತು.

ಈ ಅಧಿವೇಶನದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಸ್ವಾ | ದೀಪಕ್ ಲಿಯೋ ಡೇಸ ಅವರು, ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಅಧಿವೇಶನಕ್ಕೆ ಶಾಲಾ ಸಹ ಶಿಕ್ಷಕಿಯರಾದ ಐಡಾ ಡಿಕುನ್ಹಾ ಮತ್ತು ಮಲ್ಲಿಕಾ ಅವರು ತರಬೇತಿಯನ್ನು ನೀಡಿ ಸಹಕರಿಸಿದರು.

Exit mobile version