Site icon Suddi Belthangady

ಧರ್ಮಸ್ಥಳ: ಶವಗಳನ್ನು ಹೂತಿಟ್ಟ ಪ್ರಕರಣ- ಏಳನೇ ಗುರುತಿನ ಉತ್ಖನನ ಕಾರ್ಯ ನಡೆಯುವ ಸ್ಥಳಕ್ಕೆ ಸೀಟ್ ಅಳವಡಿಕೆ

ಧರ್ಮಸ್ಥಳ: ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆ.1ರಂದು 4ನೇ ದಿನದ ಉತ್ಖನನ ಕಾರ್ಯವು 7ನೇ ಗುರುತಿನಲ್ಲಿ ನಡೆಯಲಿದೆ.

ಧರ್ಮಸ್ಥಳ ಗ್ರಾಮ ಮತ್ತು ಆಸುಪಾಸಿನ ಪ್ರದೇಶದಲ್ಲಿ ಕೊಲೆಯಾದ ಮತ್ತು ಅತ್ಯಾಚಾರಕ್ಕೀಡಾಗಿ ಕೊಲೆಯಾದ ಮೃತದೇಹಗಳನ್ನು ಬೆದರಿಸಿ ಹೂತು ಹಾಕಿಸಲಾಗಿದೆ ಎಂದು ದೂರು ದಾಖಲಿಸಿರುವ ಅನಾಮಧೇಯ ವ್ಯಕ್ತಿಯೊಂದಿಗೆ ಎಸ್.ಐ.ಟಿ. ಅಧಿಕಾರಿಗಳು ಶೋಧ ಇಂದು 7 ನೇ ಗುರುತಿನಲ್ಲಿ ಕಾರ್ಯಾಚರಣೆ ನಡೆಸಲಿದ್ದಾರೆ.

ಮಳೆಯ ಕಾರಣದಿಂದ ಜು.31 ರಂದು 6 ಮತ್ತು 7 ಗುರುತಿಸಲ್ಪಟ ಸ್ಥಳಗಳು ಹತ್ತಿರವಿರುವ ಕಾರಣ ಎರಡು ಪ್ರದೇಶಕ್ಕೂ ಸೀಟುಗಳನ್ನು ಅಳವಡಿಸಲಾಗಿದೆ. ಇಂದು ಮತ್ತೆ ಕಾರ್ಮಿಕರು ಮತ್ತು ಸಣ್ಣ ಜೆಸಿಬಿ ಯಂತ್ರದ ಮೂಲಕ ಕಾರ್ಯಚರಣೆ ನಡೆಯಲಿದೆ. ಹಾಗೂ ಸ್ಥಳದಲ್ಲಿ ‌ಎರಡು ಕ್ಯಾಮೆರಾಗಳಲ್ಲಿ ಸ್ಥಳದ ಸಂಪೂರ್ಣ ಚಿತ್ರಣವನ್ನು ಅಧಿಕಾರಿಗಳು ಸೆರೆಹಿಡಿಯಲಾಗುತ್ತದೆ..

Exit mobile version