ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಅಡಿಕೆ ವರ್ತಕರ ಸಂಘ ಜಿಲ್ಲಾ ಸಂಘಟ ದ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ವರ್ತಕರ ಸಂಘದ ಜಿಲ್ಲಾ ಸಂಘಟನೆಗೆ ಸಿದ್ದತೆ ಬಗ್ಗೆ ಬೆಳ್ತಂಗಡಿ APMC ಪ್ರಾಂಗಣದಲ್ಲಿ ಜು.30ರಂದು ನಡೆಯಿತು.
ವರ್ತಕರ ಸಂಘಟನೆಯ ಪ್ರಶಾಂತ್ ಶೆಟ್ಟಿ ಮಡಂತ್ಯಾರು ಮಾತನಾಡಿ ಇಲಾಖೆಗಳ ಕಾನೂನು ಚೌಕಟ್ಟು ಮೀರಿದ ಕ್ರಮದ ಬಗ್ಗೆ ಭಯ ಪಡುವ ಅಗತ್ಯ ವಿಲ್ಲ. ಹಾಗೂ ವ್ಯವಸ್ಥೆಯಲ್ಲಿಯ ಅವಕಾಶ ನಾವು ಬಳಸಿಕೊಂಡು ಸಂಘಟಿತರಾಗೋಣ ಎಂದರು. ಜಿಲ್ಲಾ ಸಂಘಟಕ ರೂಪೇಶ್ ರೈ, ತಾಲೂಕು ಅಡಿಕೆ ವರ್ತಕರ ಸಂಘದ ಮಾಜಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಸವಣಾಲು ಅನಿಸಿಕೆ ವ್ಯಕ್ತಪಡಿಸಿದರು. ಜಿಲ್ಲಾ ನೂತನ ಅಧ್ಯಕ್ಷರಾಗಿ ಹೇಮಾಶಂಕರ ಶೆಟ್ಟಿ, ಕಾರ್ಯದರ್ಶಿಯಾಗಿ ಸಂಶುದ್ದೀನ್ ಜಾರಿಗೆಬೈಲ್, ಕೋಶಾಧಿಕಾರಿಯಾಗಿ ಶರತ್ ಮಡಂತ್ಯಾರು, ಉಪಾಧ್ಯಕ್ಷರಾಗಿ ನೀಲೇಶ್ ಕುಮಾರ್ ಪಟೇಲ್ ಮತ್ತು ಅಶ್ರಫ್ ಎಮ್.ಎಚ್. ಹಾಗೂ ಜತೆ ಕಾರ್ಯದರ್ಶಿಯಾಗಿ ಯಾಕುಬ್ ಎಮ್.ಪಿ. ಉರುವಲುಪದವು ಮತ್ತು ಹಕೀಂ ಆಯ್ಕೆಗೊಂಡರು.