Site icon Suddi Belthangady

ಮದ್ದಡ್ಕ: ತಾಜುಲ್ ಉಲಮಾ ರಿಲೀಫ್ ಟ್ರಸ್ಟ್ ನ (ಟಿ.ಆರ್‌.ಎಮ್) ಮಹಾಸಭೆ-ನೂತನ ಸಾಲಿನ ಸಮಿತಿ ಅಸ್ತಿತ್ವಕ್ಕೆ

ಬೆಳ್ತಂಗಡಿ: ತಾಜುಲ್ ಉಲಮಾ ರಿಲೀಫ್ ಟ್ರಸ್ಟ್ – ಟಿ.ಆರ್‌.ಎಮ್ ಮದ್ದಡ್ಕ ಇದರ ಮಹಾಸಭೆಯು ಮುರ್ಶಿದುಲ್ ಅನಾಮ್ ಅರೆಬಿಕ್ ಮದರಸ ಆಲಂದಿಲದಲ್ಲಿ ಜರುಗಿತು. ನೂರುಲ್ ಹುದಾ ಜುಮಾ ಮಸ್ಜಿದ್ ಅಧ್ಯಕ್ಷ ಅಶ್ರಫ್ ಚಿಲಿಂಬಿ ಅದ್ಯಕ್ಷತೆ ವಹಿಸಿದ್ದರು. ಉಸ್ಮಾನ್ ಸಖಾಫಿ ಆರಂಭಿಕ ದುಆ ನೆರವೇರಿಸಿದರು. ಈ ವೇಳೆ 2025/26 ನೇ ಸಾಲಿಗೆ ಪದಾಧಿಕಾರಿಗಳನ್ನು ಆರಿಸಲಾಯಿತು.

ಅಧ್ಯಕ್ಷರಾಗಿ ರಾಝಿಯುದ್ದಿನ್ ಸಬರಬೈಲ್, ಉಪಾಧ್ಯಕ್ಷರಾಗಿ ರಿಯಾಝ್ ಆಲಂದಿಲ ಮತ್ತು ಇಸ್ಮಾಯಿಲ್ ಹಾಜಿ, ಪ್ರಧಾನ ಕಾರ್ಯದರ್ಶಿಯಾಗಿ ರವೂಫ್, ಕಾರ್ಯದರ್ಶಿಯಾಗಿ ಮುಸ್ತಫ ಮತ್ತು ಜಮಾಲುದ್ದೀನ್ ಲತ್ವೀಫಿ, ಕೋಶಾಧಿಕಾರಿಯಾಗಿ ಉಸ್ಮಾನ್ ಹಾಜಿ ಆಲಂದಿಲ, ಲೆಕ್ಕ ಪರಿಶೋಧಕರಾಗಿ ಹಾಜಿ ಉಮರ್ ಮಾಸ್ಟರ್ ಅವರು ಆಯ್ಕೆಯಾದರು.

ಸಭೆಯಲ್ಲಿ ನೂರುಲ್ ಹುದಾ ಜುಮಾ ಮಸ್ಜಿದ್ ಖತೀಬ್ ಹಾಫಿಳ್ ಮುಈನುದ್ದೀನ್ ಅಮ್ಜದಿ ಅವರ ನೇತೃತ್ವದಲ್ಲಿ ಸಯ್ಯಿದ್ ಕೂರತ್ ತಂಙಳ್ ಅನುಸ್ಮರಣೆ ನಡೆಸಲಾಯಿತು. ಸಲಹಾ ಸಮೀತಿಯ ಸದಸ್ಯರಾದ ರಾಝಿಯುದ್ದೀನ್ ಸಬರಬೖಲ್, ಅಬ್ಬೋನು ಮದ್ದಡ್ಕ, ಉಸ್ಮಾನ್ ಹಾಜಿ ಆಲಂದಿಲ, ಅಶ್ರಫ್ ಚಿಲಿಂಬಿ, ಹಾಜಿ ಉಮರ್ ಮಾಸ್ಟರ್ ಮದ್ದಡ್ಕ, ಮುಹಮ್ಮದ್ ರಫೀಕ್ ಚಿಲಿಂಬಿ, ಎಂ. ಹೆಚ್. ಅಬೂಬಕ್ಕರ್ ಕಿನ್ನಿಗೋಳಿ, ಹೆಚ್. ಎಂ. ಹಸನಬ್ಬ ಚಿಲಿಂಬಿ, ಎಂ. ಉಮರಬ್ಬ (ಯು. ಆರ್.), ಎಂ. ಹೈದೆರ್ ಹಾಜಿ ಮದ್ದಡ್ಕ ಮುಂತಾದವರು ಉಪಸ್ಥಿತರಿದ್ದರು. ನೂರುಲ್ ಹುದಾ ಜುಮಾ ಮಸೀದಿ ಮಾಜಿ ಅಧ್ಯಕ್ಷ ಎಂ. ಬದ್ರುದ್ದೀನ್ ಮಾಸ್ಟರ್ ಮದ್ದಡ್ಕ ಅವರು ಸಂಸ್ಥೆಗೆ ಶುಭ ಹಾರೈಸಿದರು.

Exit mobile version