ಬೆಳ್ತಂಗಡಿ: ಪುತ್ತೂರಿನ ಜಿ.ಟೆಕ್ ಕಂಪ್ಯೂಟರ್ ಎಜುಕೇಶನ್ ನ ಆಕಾಶ್ ಜನಾರ್ಧನ್ ಅವರು ಸೌತಡ್ಕ, ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಪುನಶ್ಚೇತನ ಕೇಂದ್ರ ಸೇವಾಧಾಮಕ್ಕೆ ಜು.29ರಂದು ಭೇಟಿ ನೀಡಿದರು.
ಡಿಜಿಟಲ್ ಮಾರ್ಕೆಟಿಂಗ್ ಮತ್ತು ಸೈಬರ್ ಸೆಕ್ಯೂರಿಟಿ ಸ್ಕ್ಯಾಮ್ ಆದಾಗ ಸೈಬರ್ ಅಪರಾಧಿಗಳಿಂದ ನಮ್ಮನ್ನು ನಾವು ಹೇಗೆ ರಕ್ಷಿಸಿಕೊಳ್ಳಬೇಕು ಮತ್ತು ನಾವು ಏನು ಮಾಡಬಹುದು, ಸೈಬರ್ ಅಪರಾಧವನ್ನು ನಾವು ಹೇಗೆ ವರದಿ ಮಾಡಬಹುದು ಮತ್ತು ಸೈಬರ್ ಅಪರಾಧಿಗಳ ಬೆದರಿಕೆಯನ್ನು ಹೇಗೆ ಎದುರಿಸಲು ನಮ್ಮಿಂದ ಸಾಧ್ಯ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ಸಂಸ್ಥೆಯ ಸಂಸ್ಥಾಪಕ ಕೆ.ವಿನಾಯಕರಾವ್, ಕನ್ಯಾಡಿ ಸೇವಾಭಾರತಿ, POSH ಕಮಿಟಿ ಅಧ್ಯಕ್ಷ ವಸಂತಿ ಗೌಡ, ಸೇವಾಭಾರತಿ ಸಂಸ್ಥೆಯ ಕಾರ್ಯದರ್ಶಿ ಬಾಲಕೃಷ್ಣ, ಫಲಾನುಭವಿಗಳು, ಸಿಬ್ಬಂದಿ ವರ್ಗದವರು ಹಾಗೂ ಆರೈಕೆದಾರರು ಉಪಸ್ಥಿತರಿದ್ದರು.