ನೆರಿಯ: ಜು. 26ರಂದು ಸುರಿದ ಗಾಳಿ ಮಳೆಗೆ ಗ್ರಾಮದ ಗಂಪದಕೊಡಿ ನಿವಾಸಿ ಗಂಗಮ್ಮ, ಆಟೋ ಚಾಲಕ ದಿನೇಶ್ ಗೌಡ ಕುಳೆನಾಡಿ, ಪಿಳಿಕಲ ನಿವಾಸಿ ಜಯಂತಿ ಅವರ ಮನೆಗೆ ಮನೆಗೆ ಮರ ಬಿದ್ದು ಹಾನಿಯಾಗಿದೆ. ವಾಹನ ಚಾಲಕರ ಹಾಗೂ ಸ್ಥಳೀಯರ ಸಹಕಾರದಿಂದ ಮರ ತೆರವುಗೊಳಿಸಲಾಯಿತು.
ಸ್ಥಳಕ್ಕೆ ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ಅಶ್ರಫ್, ರಮೇಶ್ ಕೆ.ಎಸ್., ಕಂದಾಯ ಇಲಾಖೆಯ ಗ್ರಾಮ ಸಹಾಯಕ ಶ್ರೀನಿವಾಸ್ ಭೇಟಿ ನೀಡಿದ್ದರು.