ಕೊಕ್ಕಡ: ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ನಾಗನಕಟ್ಟೆಯಲ್ಲಿ ಮಂಗಳವಾರದಂದು ನಾಗರಪಂಚಮಿಯು ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಕ್ಷೀರಾಭಿಷೇಕ, ಎಳನೀರು ಅಭಿಷೇಕ, ಹಣ್ಣುಕಾಯಿ, ಪಂಚಮಾಮೃತ ಅಭಿಷೇಕ, ನಾಗತಂಬಿಲ ಸೇವೆಗಳು ನಡೆಯಿತು. ವೈದಿಕ ವಿಧಿವಿಧಾನಗಳನ್ನು ದೇವಸ್ಥಾನ ಪ್ರದಾನ ಅರ್ಚಕ ರಮಾನಂದ ಭಟ್ ಅವರ ನೇತೃತ್ವದಲ್ಲಿ ನೆರವೇರಿಸಿದರು.
ಕೊಕ್ಕಡ: ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಾಗರಪಂಚಮಿ
